ಹೊಸದಿಗಂತ ವರದಿ ಹಾಸನ:
ಹೆಲ್ಮೆಟ್ ಹಾಕಿಲ್ಲ ಎಂದು ಚಿಕ್ಕಮಗಳೂರು ನಗರ ಪೊಲೀಸರು ವಕೀಲರ ಮೇಲೆ ಮನಸ್ಸೋ ಇಚ್ಛೆ ಹಲ್ಲೆ ನಡೆಸಿರುವುದನ್ನು ವಿರೋಧಿಸಿ ಹಾಸನ ಜಿಲ್ಲಾ ವಕೀಲರ ಸಂಘವು ಪೊಲೀಸ್ ಇಲಾಖೆ ವಿರುದ್ಧ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿದರು.
ನಗರದಲ್ಲಿ ಸೋಮವಾರ ಹಾಸನ ಜಿಲ್ಲಾ ವಕೀಲರ ಸಂಘದ ನೂರಾರು ವಕೀಲರು ಕರ್ತವ್ಯ ಬಹಿಷ್ಕರಿಸಿ ಚಿಕ್ಕಮಗಳೂರು ವಕೀಲ ಪುನೀತ್ ಎಂಬುವವರ ಮೇಲೆ ಹೆಲ್ಮೆಟ್ ಧರಿಸಿಲ್ಲವೆಂದು ಮನಸ್ಸೋ ಇಚ್ಚೆ ಧಳಿಸಿರುವುದ ಖಂಡಿಸಿ ಪೋಲಿಸರ ವಿರುದ್ಧ ಚನ್ನಪಟ್ಟಣದ ಜಿಲ್ಲಾ ನ್ಯಾಯಾಲಯದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಬೃಹತ್ ಮೆರವಣಿಗೆ ನಡೆಸಿದರು. ಕೆಲ ಕಾಲ ಜಿಲ್ಲಾಧಿಕಾರಿ ಆವರಣದಲ್ಲಿ ಪ್ರತಿಭಟನೆ ನಡೆಸಿದ ವಕೀಲರು ನಂತರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ವಕೀಲರ ಸಂಘದ ಅಧ್ಯಕ್ಷ್ಯ ಪೂರ್ಣಚಂದ್ರ ತೇಜಸ್ವಿ, ಹೆಲ್ಮೆಟ್ ಧರಿಸಿಲ್ಲ ಎಂದು ಚಿಕ್ಕಮಗಳೂರು ಸಂಘದ ಸದಸ್ಯರಾದ ವಕೀಲ ಪ್ರೀತಮ್ ಎಂಬುವವರ ಮೇಲೆ 6 ಪೋಲಿಸ್ ಸಿಬ್ಬಂದಿಗಳು ಅಮಾನುಷವಾಗಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಇದರಿಂದ ವಕೀಲ ಪ್ರೀತಂರ ಎದೆ, ಕೈ ಮತ್ತು ಬೆನ್ನಿನಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಬ್ಬ ಸಾರ್ವಜನಿಕ ವಲಯದಲ್ಲಿ ಕರ್ತವ್ಯ ನಿರ್ವಹಿಸುವ ವಕೀಲರಿಗೆ ಈ ರೀತಿ ಪೋಲಿಸರು ದುರ್ವರ್ತನೆ ತೋರಿದರೆ, ಜನಸಾಮನ್ಯರ ಪರಿಸ್ಥಿ ಏನು.? ಎಂದು ಪ್ರಶ್ನೆ ಮಾಡಿದರು.
ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಜವಬ್ದಾರಿಯಲ್ಲಿರುವ ಪೋಲಿಸರು ಚಿಕ್ಕಮಗಳೂರು ರಸ್ತೆಯಲ್ಲಿ ಧರಣಿ ಮಾಡಿರುವುದು ದುರದುಷ್ಟಕರ ಮತ್ತು ಕಾನೂನಿಗೆ ವಿರುದ್ಧವಾಗಿರುತ್ತದೆ. ಅಲ್ಲದೆ ವೃತ್ತಿನಿರತ ಮತ್ತು ಗೌರವ ಕಾಪಾಡುವ ಪೋಲಿಸ್ ಲಾಠಿಯನ್ನು ನಡುರಸ್ತೆಯಲ್ಲಿ ಬೆಂಕಿ ಹಚ್ಚಿ, ತೊಡೆ ತಟ್ಟಿ ವಕೀಲರನ್ನು ಅವಹೇಳನಕಾರಿಯಾಗಿ ನಿಂದಿಸಿ ವಕೀಲರುಗಳ ಮನೆಗೆ ನುಗ್ಗಿ ಹೊಡೆಯುತ್ತೇವೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಮಾದ್ಯಮಗಳ ಮುಂದೆ ನೇರವಾಗಿ ಹೇಳಿಕೆ ನೀಡಿದ್ದಾರೆ. ಇದು ಪೋಲಿಸರು ಸಮಾಜದಲ್ಲಿ ಶಾಂತಿ ಕದಡುವ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದರು.
ವಕೀಲರಲ್ಲದೆ ನ್ಯಾಯಾಂಗ ವ್ಯವಸ್ಥೆಯನ್ನು ಪ್ರಶ್ನಿಸಿರುವುದು ಕಾನೂನಿನ ನೇರ ಉಲ್ಲಂಘನೆಯಾಗಿರುವುದರಿಂದ ಗೃಹ ಮಂತ್ರಿಗಳು ಪುಂಡ ಪೋಲಿಸ್ ಅಧಿಕಾರಿ ಮತ್ತು ಪೇದೆಗಳ ಮೇಲೆ ಕಾನೂನು ರೀತಿ ಕ್ರಮ ಜರುಗಿಸಿ, ನ್ಯಾಯಾಂಗ ವ್ಯವಸ್ಥೆಯನ್ನು ಬುಡಮೇಲೆ ಮಾಡಲು ಹೋರಾಟಿರುವ ಪೋಲಿಸ್ ದುಂಡವರ್ತನೆಗೆ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.