Tuesday, December 30, 2025

HEALTH | ಬೆಳಗ್ಗೆ ಎದ್ದಾಗ ತಲೆನೋವು ಕಾಡುತ್ತಾ? ಇದೇ ಕಾರಣ ಇರಬಹುದು ನೋಡಿ!

ಬೆಳಗ್ಗೆ ಎದ್ದ ಕೂಡಲೇ ದಿನದ ಆರಂಭ ಚುರುಕಾಗಿರಬೇಕೆಂದು ನಾವು ನಿರೀಕ್ಷಿಸುತ್ತೇವೆ. ಆದರೆ ಕೆಲವರಿಗೆ ಕಣ್ಣು ತೆರೆಯುವ ಮೊದಲೇ ತಲೆ ಬಾರವಾದ ಅನುಭವ, ಒತ್ತಡ, ನೋವು ಅಥವಾ ಅಸ್ವಸ್ಥತೆ ಕಾಡುತ್ತದೆ. ಇದು ಇಡೀ ದಿನದ ಮನಸ್ಥಿತಿಯನ್ನೇ ಹಾಳುಮಾಡುವಷ್ಟು ಗಂಭೀರವಾಗಬಹುದು. ವಿಶೇಷವಾಗಿ 30 ವರ್ಷ ದಾಟಿದವರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಬೆಳಗಿನ ತಲೆನೋವು ಸಾಮಾನ್ಯವೆಂದು ಕಡೆಗಣಿಸಬಾರದು. ಇದಕ್ಕೆ ನಿದ್ರೆಯ ವೇಳೆ ನಡೆಯುವ ಕೆಲ ಅಂಶಗಳು ನೇರ ಕಾರಣವಾಗಿರುತ್ತವೆ.

  • ಹಲ್ಲು ಕಡಿಯುವ ಅಭ್ಯಾಸ (Bruxism): ರಾತ್ರಿ ನಿದ್ರೆಯಲ್ಲೇ ಹಲ್ಲು ಕಡಿಯುವವರಿಗೆ ಬೆಳಗ್ಗೆ ತಲೆನೋವು ಸಾಮಾನ್ಯ. ಹಲ್ಲಿನ ನರಗಳು ನೇರವಾಗಿ ತಲೆಯ ನರಮಂಡಲಕ್ಕೆ ಸಂಪರ್ಕ ಹೊಂದಿರುವುದರಿಂದ, ದವಡೆ ಮೇಲೆ ಬೀಳುವ ಒತ್ತಡ ತಲೆನೋವಿಗೆ ಕಾರಣವಾಗುತ್ತದೆ. ರಾತ್ರಿ ಗಟ್ಟಿ ಆಹಾರ ಸೇವನೆಯೂ ಇದನ್ನು ಹೆಚ್ಚಿಸುತ್ತದೆ.
  • ನಿದ್ರೆಯ ಕೊರತೆ: ಪೂರ್ಣ ನಿದ್ರೆ ಆಗದಿದ್ದರೆ REM (Rapid Eye Movement) ಹಂತದಲ್ಲಿ ವ್ಯತ್ಯಯ ಉಂಟಾಗುತ್ತದೆ. ಈ ಹಂತದಲ್ಲಿ ಕಣ್ಣಿನ ಚಲನೆ ಹೆಚ್ಚಾಗಿದ್ದು, ನರಗಳಿಗೆ ಒತ್ತಡ ಬೀಳುತ್ತದೆ. ಇದರ ಪರಿಣಾಮವಾಗಿ ಬೆಳಗ್ಗೆ ತಲೆನೋವು ಕಾಣಿಸಿಕೊಳ್ಳುತ್ತದೆ.
  • ಕೆಫೀನ್ ಪರಿಣಾಮ: ಮಲಗುವ ಮುನ್ನ ಟೀ ಅಥವಾ ಕಾಫಿ ಕುಡಿಯುವ ಅಭ್ಯಾಸ ನಿದ್ರೆಗೆ ಅಡ್ಡಿಯಾಗುತ್ತದೆ. ಕೆಫೀನ್ ದೇಹದ ನಿದ್ರಾಕಾರಕ ಕ್ರಿಯೆಗಳನ್ನು ತಡೆಯುವುದರಿಂದ ಬೆಳಗ್ಗೆ ತಲೆನೋವು ಉಂಟಾಗಬಹುದು.
  • ಮದ್ಯಪಾನ: ರಾತ್ರಿ ಮದ್ಯಪಾನ ಮಾಡಿದವರಲ್ಲಿ ಬೆಳಿಗ್ಗೆ ತೀವ್ರ ತಲೆನೋವು ಕಾಣಿಸಿಕೊಳ್ಳುತ್ತದೆ. ಇದು ನರಮಂಡಲದ ಮೇಲೆ ಮದ್ಯ ಬೀರುವ ಪರಿಣಾಮ.

ಏನು ಮಾಡಬೇಕು?:

ನಿಯಮಿತ ನಿದ್ರೆ, ಮಲಗುವ ಮುನ್ನ ಕೆಫೀನ್ ತಪ್ಪಿಸುವುದು, ಹಲ್ಲು ಕಡಿಯುವ ಅಭ್ಯಾಸಕ್ಕೆ ಚಿಕಿತ್ಸೆ ಪಡೆಯುವುದು ಹಾಗೂ ಮದ್ಯಪಾನ ಕಡಿಮೆ ಮಾಡುವುದು ಬೆಳಗಿನ ತಲೆನೋವಿನಿಂದ ತಪ್ಪಿಸಿಕೊಳ್ಳಲು ಸಹಕಾರಿ.

error: Content is protected !!