ಸಾಮಾನ್ಯವಾಗಿ ಗರ್ಭಿಣಿಯರಿಗೆ ಬಾಳೆದೆಲೆಯ ಊಟ ಮಾಡೋದಕ್ಕೆ ಬಿಡುವುದಿಲ್ಲ. ಯಾವುದೇ ಶುಭ ಕಾರ್ಯಕ್ರಮಗಳಿಗೆ ಹೋದರೂ ತಟ್ಟೆಯಲ್ಲಿ ಗರ್ಭಿಣಿಯರಿಗೆ ಊಟ ನೀಡುತ್ತಾರೆ.
ಬಾಳೆದೆಲೆಯ ಊಟದಿಂದ ಮಕ್ಕಳ ದೇಹದ ಮೇಲೆ ಹಸಿರು ಕಲೆ ಮೂಡುತ್ತದೆ ಎನ್ನುವುದು ದೊಡ್ಡವರ ನಂಬಿಕೆ. ಇದಕ್ಕೆ ಯಾವ ಸೈಂಟಿಫಿಕ್ ವಿವರಣೆ ಇಲ್ಲ.
ಕೆಲವು ಮಹಿಳೆಯರು ಬಾಳೆದೆಲೆ ಊಟ ಮಾಡಿದರೂ ಮಕ್ಕಳಿಗೆ ಯಾವ ಕಲೆಯೂ ಇರುವುದಿಲ್ಲ. ಬಾಳೆದೆಲೆಯ ಊಟದಿಂದ ಸಿಗುವ ತೃಪ್ತಿ ತಟ್ಟೆಯಲ್ಲಿಲ್ಲ ಎನ್ನಬಹುದು.
ಕೆಲವೊಮ್ಮೆ ಹಣ್ಣು ಹಾಳಾಗದಂತೆ ಎಲೆಗಳಿಗೆ ಕೆಮಿಕಲ್ ಸ್ಪ್ರೇ ಮಾಡಿರಬಹುದು ಇದು ಗರ್ಭಿಣಿಯರ ಹೊಟ್ಟೆ ಸೇರುವುದು ಬೇಡ ಎಂದು ದೊಡ್ಡವರು ಹೀಗೆ ಹೇಳಿರಬಹುದು