ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಕೊರಿಯಾದಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಲೇ ಇದೆ, ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಮಹಿಳೆಯರಿಗೆ ಹೆಚ್ಚು ಮಕ್ಕಳನ್ನು ಹೆರಬೇಕು ಎಂದು ಮನವಿ ಮಾಡಿದ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ಕಿಮ್ ಜಾಂಗ್ ಉನ್ ತಾಯಂದಿರ ರಾಷ್ಟ್ರೀಯ ಸಭೆ ಕರೆದಿದ್ದು, ಬಂದ ತಾಯಂದಿರಿಗೆ ಹೆಚ್ಚು ಮಕ್ಕಳನ್ನು ಹೆರುವಂತೆ ಮನವಿ ಮಾಡಿ ಕಣ್ಣೀರಿಟ್ಟಿದ್ದಾರೆ.
ಕಳೆದ ೧೦ ವರ್ಷದಿಂದ ಉತ್ತರ ಕೊರಿಯಾದ ಜನನ ಪ್ರಮಾಣ ಕುಸಿಯುತ್ತಲೇ ಇದೆ ಎಂದು ದಕ್ಷಿಣ ಕೊರಿಯಾ ಸರ್ಕಾರ ಅಂದಾಜಿಸಿದೆ. ಕಿಮ್ ಕಣ್ಣೀರಿಟ್ಟಾಗ ನೂರಾರು ಮಹಿಳೆಯರು ಕಣ್ಣೀರಿಟ್ಟಿದ್ದಾರೆ.
ಮೂರು ಅಥವಾ ಮೂರಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ಕುಟುಂಬಕ್ಕೆ ಉಚಿತ ವಸತಿ, ಸಬ್ಸಿಡಿ, ಆಹಾರ, ಔಷಧ, ಗೃಹಪಯೋಗಿ ವಸ್ತುಗಳು, ಶೈಕ್ಷಣಿಕ ಸವಲತ್ತುಗಳನ್ನು ಒದಗಿಸುತ್ತೇವೆ ಎಂದಿದ್ದಾರೆ.
Kim Jong Un CRIES while telling North Korean women to have more babies.
The dictator shed tears while speaking at the National Mothers Meeting as he urged women to boost the countries birth rate. pic.twitter.com/J354CyVnln
— Oli London (@OliLondonTV) December 5, 2023