ಹೊಸದಿಗಂತ ಡಿಜಿಟಲ್‌ಡೆಸ್ಕ್:
ಮುಂಗಾರುಮಳೆ ಸಿನಿಮಾ ಖ್ಯಾತಿಯ ನಟಿ ಪೂಜಾಗಾಂಧಿ ಉದ್ಯಮಿ ವಿಜಯ್ ಗೋರ್ಪಡೆ ಜೊತೆಗೆ ಇತ್ತೀಚೆಗೆ ಮಂತ್ರಮಾಂಗಲ್ಯ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆಯ ಬಳಿಕ ಪತಿ ಜೊತೆಗೆ ರಾಷ್ಟ್ರಕವಿ ಕುವೆಂಪು ಹುಟ್ಟೂರು ಕುಪ್ಪಳ್ಳಿಗೆ ಭೇಟಿ ನೀಡಿರುವುದು ವಿಶೇಷ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿರುವ ರಾಷ್ಟ್ರಕವಿ ಕುವೆಂಪು ಅವರ ಹುಟ್ಟೂರು ಕುಪ್ಪಳ್ಳಿಗೆ ಭೇಟಿ ನೀಡಿರುವ ಪೂಜಾ ಗಾಂಧಿ ಹಾಗೂ ವಿಜಯ್, ಕುವೆಂಪು ಅವರ ಕವಿಮನೆ, ಕೈವಿಶೈಲ, ಶತಮಾನೋತ್ಸವ ಭವನ, ಕಲಾನಿಕೇತನ, ಕುವೆಂಪು ಸ್ಮಾರಕ ಅರಣ್ಯ, ವಸ್ತು ಸಂಗ್ರಹಾಲಯಗಳಿಗೆ ಭೇಟಿ ನೀಡಿದ್ದಾರೆ.
ಪತಿಯೊಂದಿಗೆ ಕುಪ್ಪಳ್ಳಿಗೆ ಭೇಟಿ ನೀಡಿದ ಸುಂದರ ಕ್ಷಣಗಳನ್ನು ಇದೀಗ ಪೂಜಾ ಗಾಂಧಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.