ಹೊಸದಿಗಂತ ಡಿಜಿಟಲ್‌ಡೆಸ್ಕ್:
ಉತ್ತರ ಭಾರತದ ಕೆಲವು ರಾಜ್ಯಗಳನ್ನು ಗೋಮೂತ್ರ ಎಂದು ಕರೆದು ವಿವಾದ ಹುಟ್ಟುಹಾಕಿದ್ದ ಡಿಎಂಕೆ ಸಂಸದ ಸೆಂಥಿಲ್ ಕುಮಾರ್ ಕ್ಷಮೆಯಾಚಿಸಿದ್ದು, ದುರಾದೃಷ್ಟವಶಾತ್ ಎಂದಿದ್ದಾರೆ.
ಈ ಕುರಿತು ಲೋಕಸಭೆಯಲ್ಲಿ ಮಾತನಾಡಿದ ಸಂಸದ ಸೆಂಥಿಲ್ ಕುಮಾರ್ ಅದನ್ನು ಯಾವುದೋ ಉದ್ದೇಶದಿಂದ ಬಳಸಿದ್ದಲ್ಲ.ಎಲ್ಲಾ ಕಡೆ ತಪ್ಪು ಅರ್ಥ ರವಾನಿಸಿದ್ದಕ್ಕಾಗಿ ನಾನು ಕ್ಷಮೆ ಯಾಚಿಸುತ್ತೇನೆ ಎಂದಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಬರೆದುಕೊಂಡಿರುವ ಅವರು, ಇತ್ತೀಚಿನ ಐದು ರಾಜ್ಯಗಳ ವಿಧಾನಸಭೆ ಚುನಾವಣೆಯ ಫಲಿತಾಂಶದ ಕುರಿತು ಪ್ರತಿಕ್ರಿಯೆ ನೀಡುವಾಗ, ನಾನು ಅನುಚಿತ ರೀತಿಯಲ್ಲಿ ಪದವೊಂದನ್ನು ಬಳಸಿದ್ದೆ. ಅದನ್ನು ಯಾವುದೋ ಉದ್ದೇಶದಿಂದ ಬಳಸಿದ್ದಲ್ಲ. ಎಲ್ಲಾ ಕಡೆ ತಪ್ಪು ಅರ್ಥ ರವಾನಿಸಿದ್ದಕ್ಕಾಗಿ ನಾನು ಕ್ಷಮೆ ಯಾಚಿಸುತ್ತೇನೆ.
ಚುನಾವಣೆಗಳಲ್ಲಿ ಗೆಲ್ಲುವ ಬಿಜೆಪಿ ಶಕ್ತಿಯು ಮುಖ್ಯವಾಗಿ ಹಿಂದಿ ಹೃದಯಭಾಗದ ರಾಜ್ಯಗಳಲ್ಲಿ ಮಾತ್ರ ಉಳಿದಿದೆ. ನೀವು ದಕ್ಷಿಣ ಭಾರತಕ್ಕೆ ಬರುವುದು ಸಾಧ್ಯವಿಲ್ಲ ಎಂದು ಹೇಳುವಾಗ ಅವರು ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳನ್ನು ‘ಗೋಮೂತ್ರ ರಾಜ್ಯಗಳು’ ಎಂದು ಅವಹೇಳನಾಕಾರಿಯಾಗಿ ಹೇಳಿದ್ದರು. ಇದು ವ್ಯಾಪಕ ಟೀಕೆಗೆ ಗುರಿಯಾಗಿತ್ತು.