ಕಳಸಾ ಬಂಡೂರಿ, ಮಹದಾಯಿ ಯೋಜನೆ ಕಾಮಗಾರಿ ಆರಂಭಿಸಲು ಸಿಎಂ ಸಿದ್ದರಾಮಯ್ಯಗೆ ಮನವಿ

ಹೊಸದಿಗಂತ ಡಿಜಿಟಲ್‌ಡೆಸ್ಕ್:‌

ಕಳಸಾ ಬಂಡೂರಿ, ಮಹದಾಯಿ ಯೋಜನೆಯ ಕಾಮಗಾರಿ ಆರಂಭಿಸಬೇಕು, ಜಿಲ್ಲೆಯ ಬರ ಪರಿಹಾರಕ್ಕೆ ೨೧೨ ಕೋಟಿ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ರತ್ನ ಭಾರತ ರೈತ ಸಮಾಜ ನವ ದೆಹಲಿಯ ಸದಸ್ಯರು ಹಾಗೂ ರೈತ ಮುಖಂಡರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.

ಮಂಗಳವಾರ ಗೋಕುಲ ರಸ್ತೆ ವಿಮಾನ ನಿಲ್ದಾಣದಲ್ಲಿ ರೈತ ಮುಖಂಡರು ಸಿಎಂ ಅವರಿಗೆ ಭೇಟಿ ಮಾಡಿ ಮನವಿ ಪತ್ರ ನೀಡಿ ಜಿಲ್ಲೆಗೆ ಬರ ಪರಿಹಾರಕ್ಕೆ ೨೧೨ ಕೋಟಿ ರೂ. ಬಿಡುಗಡೆ ಮಾಡಲು ಮನವಿ ಮಾಡಿದರು.

ಮನವಿ ಪತ್ರ ಸ್ವೀಕರಿಸಿದ ಸಿಎಂ ಸಿದ್ದರಾಮಯ್ಯ ಅವರು ಒಳ್ಳೆಯರ ಸಚಿವರ ನೀಡಿದ್ದೇವೆ ಮತ್ತೆ ಏನು ಬೇಕು? ಎಂದು ನಂಗೆ ಚಟಾಕಿ ಹಾರಿಸಿದರು.

ರತ್ನ ಭಾರತ ರೈತ ಸಮಾಜದ ರಾಷ್ಟ್ರೀಯ ಉಪಾಧ್ಯಕ್ಷ ಹೇಮನಗೌಡ ಬಸನಗೌಡ ಅವರು ಕಳಸಾ ಬಂಡೂರಿ, ಮಹದಾಯಿ ಯೋಜನೆ ಕಾಮಗಾರಿ ಆರಂಭಿಸಲು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ, ಅದನ್ನು ಕೇಂದ್ರ ಸರ್ಕಾರ ಮಾಡಬೇಕಾಗಿದೆ. ನೀವು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರನ್ನು ಕೇಳುವುದು ಬಿಟ್ಟು ನಮನ್ನು ಹಿಡಿದಿದ್ದಿರಾ? ಎಂದು ಹೇಳಿ ವಿಮಾನ ನಿಲ್ದಾಣ ಒಳಗೆ ಹೋದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ರೆವಣ್ಣ ಹುಬ್ಬಳ್ಳಿ, ಎಲ್.ಕೆ. ಶಿವನಗೌಡ, ಬಸರಾಜ ಯೋಗಪ್ಪನವರ, ಪ್ರದೀಪ ಹುಬ್ಬಳ್ಳಿ ಹಾಗೂ ಚಂಬಣ್ಣ ಕುಸುಗಲ್ ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!