ಈ ಬಾರಿ ದೆಹಲಿ ಶಾಲಾ ಮಕ್ಕಳಿಗೆ ಚಳಿಗಾಲದ ರಜೆ ಜಸ್ಟ್ 6 ದಿನ!

ಹೊಸದಿಗಂತ ಡಿಜಿಟಲ್‌ಡೆಸ್ಕ್:‌ 

ಈ ಬಾರಿ ದೆಹಲಿಯ ಶಾಲೆಗಳಲ್ಲಿ 6 ದಿನ ಚಳಿಗಾಲದ ರಜೆ ನೀಡಲಾಗಿದೆ. ಜನವರಿ 1 ರಿಂದ 6 ರವರೆಗೆ ರಜೆ ನೀಡಿ ಸರ್ಕಾರ ಆದೇಶಿಸಿದೆ.

ದೆಹಲಿಯ ಎಲ್ಲಾ ಶಾಲೆಗಳಿಗೆ 2024 ರ ಮೊದಲ ದಿನ, ಅಂದರೆ ಜನವರಿ 1 ರಿಂದ 6 ರವರೆಗೆ ಚಳಿಗಾಲದ ರಜೆಯನ್ನು ಘೋಷಿಸಲಾಗಿದೆ.ಇದಕ್ಕೆ ಕಾರಣ ನವೆಂಬರ್ ತಿಂಗಳಲ್ಲಿ ಮಾಲಿನ್ಯದ ಕಾರಣ ಚಳಿಗಾಲದ ಕೆಲವು ದಿನ ರಜೆ ನೀಡಲಾಗಿತ್ತು. ನವೆಂಬರ್ 9 ರಿಂದ 18 ರವರೆಗೆ ಶಾಲೆಗಳನ್ನು ಮುಚ್ಚಲಾಗಿತ್ತು. ಇದೇ ಕಾರಣದಿಂದ ಈ ಬಾರಿ ಕಡಿಮೆ ರಜೆ ಘೋಷಿಸಿದೆ.

ಶಾಲೆಗಳಿಗೆ ಚಳಿಗಾಲದ ರಜೆಯನ್ನು ಸಾಮಾನ್ಯವಾಗಿ ಡಿಸೆಂಬರ್-ಜನವರಿ ತಿಂಗಳಲ್ಲಿ ಘೋಷಿಸಲಾಗುತ್ತದೆ, ಆದರೆ ಈ ಬಾರಿ ಮಾಲಿನ್ಯ ಹೆಚ್ಚಾದ ಕಾರಣ ಸರ್ಕಾರವು ನವೆಂಬರ್‌ನಲ್ಲಿ ಚಳಿಗಾಲದ ರಜಾದಿನಗಳನ್ನು ಘೋಷಿಸಿತು. ಮಕ್ಕಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ದೆಹಲಿ ಸರ್ಕಾರದ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ನವೆಂಬರ್ ತಿಂಗಳಿನಲ್ಲಿ ದೆಹಲಿಯಲ್ಲಿ ವಾಯು ಮಾಲಿನ್ಯವು ‘ಅಪಾಯಕಾರಿ’ ಮಟ್ಟವನ್ನು ತಲುಪಿತ್ತು. ಹಲವು ಪ್ರದೇಶಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) 900 ದಾಟಿತ್ತು. ಈ ಅವಧಿಯಲ್ಲಿ, ಮಕ್ಕಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು, 10 ಮತ್ತು 12 ನೇ ತರಗತಿಯ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಎಲ್ಲಾ ತರಗತಿಗಳು ನವೆಂಬರ್ 10 ರವರೆಗೆ ಆನ್‌ಲೈನ್ ಮೋಡ್‌ನಲ್ಲಿ ನಡೆಯುತ್ತಿದ್ದವು. ಆದರೆ ಅಷ್ಟರಲ್ಲಿ ಅರವಿಂದ್ ಕೇಜ್ರಿವಾಲ್ ಅವರು ಚಳಿಗಾಲದ ರಜೆಯನ್ನು ಮುಂಚಿತವಾಗಿಯೇ ಘೋಷಿಸುವಂತೆ ಸೂಚನೆಗಳನ್ನು ನೀಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!