ಮಿಂಚೌಂಗ್ ಹೊಡೆತಕ್ಕೆ ಚೆನ್ನೈ ತತ್ತರ: ಭಾರತೀಯ ವಾಯುಸೇನೆಯಿಂದ ರಕ್ಷಣಾ ಕಾರ್ಯಾಚರಣೆ ಮುಂದುವರಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಮಿಳುನಾಡು, ಆಂಧ್ರಪ್ರದೇಶದಲ್ಲಿ ರೌದ್ರನರ್ತನ ತೋರಿದ ನಂತರ ಇದೀಗ ಮಿಂಚೌಂಗ್ ಚಂಡಮಾರುತ ತಣ್ಣಗಾಗಿದೆ.

Chennai Rains Today: Flights cancelled, local trains shut, subways floodedಆದರೆ ಚಂಡಮಾರುತದ ಹೊಡೆತದಿಂದಾದ ಅನಾಹುತಗಳಿಂದ ಮಾತ್ರ ಜನ ಇನ್ನೂ ಚೇತರಿಸಿಕೊಂಡಿಲ್ಲ. ಭಾರೀ ಮಳೆಯಿಂದ ಚೆನ್ನೈ ಹಾಗೂ ಇನ್ನಿತರ ನಗರಗಳು ಜಲಾವೃತವಾಗಿವೆ, ಇನ್ನೂ ಸಾಕಷ್ಟು ಮಂದಿ ಸಹಾಯದ ನಿರೀಕ್ಷೆಯಲ್ಲಿದ್ದಾರೆ.

Chennai Rains Live Updates: At least 17 dead in city in rain-related  incidentsಭಾರತೀಯ ವಾಯುಪಡೆಯ ರಕ್ಷಣಾ ಕಾರ್ಯಾಚರಣೆ ಇನ್ನೂ ಮುಂದುವರಿದಿದ್ದು, ಚಂಡಮಾರುತದ ಹೊಡೆತದಿಂದ ಚೇತರಿಸಿಕೊಳ್ಳಲು ಸಹಾಯ ಮಾಡಲಾಗುತ್ತಿದೆ.

Chennai rain update: Heavy downpour for next 3 days, red alert issued, 3  rain-related deaths | Mintತಾಂಬರಂ, ಮಡಿಚುರ್, ವೆಲಚೇರಿ ಹಾಗೂ ಪಲ್ಲಿಕರನೇ ಚಂಡಮಾರುತದಿಂದ ಸಾಕಷ್ಟು ಹಾನಿಗೀಡಾಗಿದೆ. ಸರ್ಕಾರ ಹಾಗೂ ವಾಯುಪಡೆಯ ರಕ್ಷಣಾ ತಂಡಗಳು ಜನರಿಗೆ ಪರಿಹಾರ ಸಾಮಾಗ್ರಿಗಳನ್ನು ಒದಗಿಸುತ್ತಿದ್ದಾರೆ.

Cyclone Michaung Live Updates, Cyclone Michaung Tracking: Storm Makes  Landfall, Andhra On High Alertಚೇತಕ್ ಹೆಲಿಕಾಪ್ಟರ್‌ಗಳ ಮೂಲಕ ಜನರನ್ನು ರಕ್ಷಣೆ ಮಾಡಲಾಗುತ್ತಿದೆ. ಚಂಡಮಾರುತದಿಂದಾಗಿ ಅಂಗಡಿಗಳಲ್ಲಿ ದಿನಸಿ ಕೊಳ್ಳಲಾರದಷ್ಟು ದುಬಾರಿಯಾಗಿದೆ. ರಕ್ಷಣಾ ಸಿಬ್ಬಂದಿ ಹಾಲು,ನೀರು, ಬ್ರೆಡ್, ಬಿಸ್ಕೆಟ್ ಹಾಗೂ ಕೆಲ ದಿನಸಿ ಸಾಮಾನುಗಳನ್ನು ವಿತರಿಸಿ ಸಹಾಯ ಮಾಡುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!