ದೆಹಲಿಯಲ್ಲಿ ಪತ್ತೆಯಾದ ನ್ಯುಮೋನಿಯಾ ಪ್ರಕರಣಕ್ಕೂ ಚೀನಾ ಸೋಂಕಿಗೂ ಸಂಬಂಧವಿಲ್ಲ: ಕೇಂದ್ರ ಆರೋಗ್ಯ ಸಚಿವಾಲಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೆಹಲಿ ಏಮ್ಸ್​​ ಆಸ್ಪತ್ರೆಯಲ್ಲಿ ಪತ್ತೆಯಾಗಿರುವ ನ್ಯುಮೋನಿಯಾ ಪ್ರಕರಣಕ್ಕೂ ಚೀನಾದಲ್ಲಿ ಹೆಚ್ಚಿರುವ ನ್ಯುಮೋನಿಯಾ ಪ್ರಕರಣಗಳಿಗೂ ಯಾವುದೇ ಸಂಬಂಧ ಇಲ್ಲ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವಾಲಯ ತಿಳಿಸಿದೆ.

ಏಮ್ಸ್‌ನ​ಲ್ಲಿ ಏಳು ಬ್ಯಾಕ್ಟೀರಿಯಾ ಪ್ರಕರಣಗಳು ಪತ್ತೆಯಾಗಿದ್ದು, ಇದು ಚೀನಾ ಬ್ಯಾಕ್ಟೀರಿಯಾದೊಂದಿಗೆ ಸಂಬಂಧ ಹೊಂದಿದೆ ಎಂದು ಇತ್ತೀಚೆಗೆ ಮಾಧ್ಯಮವೊಂದು ವರದಿ ಮಾಡಿತ್ತು. ಆದರೆ, ಈ ವರದಿಯು ಸಂಪೂರ್ಣವಾಗಿ ತಪ್ಪು ಮಾಹಿತಿಯಿಂದ ಕೂಡಿದ್ದಾಗಿ ಸಚಿವಾಲಯ ತಿಳಿಸಿದೆ.

ಇತ್ತೀಚಿನ ದಿನಗಳಲ್ಲಿ ವಿದೇಶಗಲ್ಲಿ ಮಕ್ಕಳಲ್ಲಿ ಶ್ವಾಸಕೋಶ ಸೋಂಕು ಪ್ರಕರಣಗಳು ಹೆಚ್ಚುತ್ತಿದ್ದು ದೆಹಲಿಯಲ್ಲಿ ಕಂಡುಬಂದಿರುವ ಪ್ರಕರಣಗಳಿಗೂ ಯಾವುದೇ ರೀತಿಯ ನಂಟಿಲ್ಲ. ದೆಹಲಿಯಲ್ಲಿ ಪತ್ತೆಯಾಗಿರುವ ನ್ಯೂಮೋನಿಯಾ ಪ್ರಕರಣ ಕಳೆದ ಆರು ತಿಂಗಳಿಂದ ಅಂದರೆ ಏಪ್ರಿಲ್‌ನಿಂದ ಸೆಪ್ಟೆಂಬರ್​ 2023ರವರೆಗೆ ಕಾಣಿಸಿಕೊಂಡ ಪ್ರಕರಣವಾಗಿದೆ.

ಜನವರಿ 2023ರಿಂದ ಇಲ್ಲಿಯವರೆಗೆ ಏಮ್ಸ್​ ಮೈಕ್ರೋಬಯೋಲಾಜಿ ವಿಭಾಗ ಪರೀಕ್ಷೆ ಮಾಡಿರುವ 611 ಮಾದರಿಗಳಲ್ಲಿ ಯಾವುದೇ ಮೈಕೋಪ್ಲಾಸ್ಮಾ ನ್ಯುಮೋನಿಯಾ ಪ್ರಕರಣಗಳಿಲ್ಲ. ಮೈಕೋಪ್ಲಾಸ್ಮಾ ನ್ಯುಮೋನಿಯಾವು ಸಮುದಾಯ ಸ್ವಾಧೀನಪಡಿಸಿಕೊಂಡಿರುವ ನ್ಯುಮೋನಿಯಾದ ಸಾಮಾನ್ಯ ಬ್ಯಾಕ್ಟೀರಿಯಾದ ಕಾರಣವಾಗಿದೆ. ಇದು ಕೇವಲ ಶೇ 15 ರಿಂದ 30ರ ಪ್ರಮಾಣದಲ್ಲಿ ಕಂಡುಬರುತ್ತದೆ. ಈ ರೀತಿಯ ಬ್ಯಾಕ್ಟೀರಿಯಾ ಭಾರತದ ಯಾವುದೇ ಭಾಗದಲ್ಲಿ ಹೆಚ್ಚಳಗೊಂಡಿಲ್ಲ. ಆದಾಗ್ಯೂ ಕೇಂದ್ರ ಆರೋಗ್ಯ ಸಚಿವಾಲಯ ರಾಜ್ಯ ಆರೋಗ್ಯ ಅಧಿಕಾರಿಗಳೊಂದಿಗೆ ಪ್ರತಿದಿನ ಸೋಂಕು ಪರೀಕ್ಷೆ ನಡೆಸಿದೆ ಎಂದು ಪ್ರಕಟಣೆ ತಿಳಿಸಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!