ಮಕ್ಕಳಲ್ಲಿ ಇನ್ಫೆಕ್ಷನ್: ಒಂದೇ ದಿನದಲ್ಲಿ 9 ನವಜಾತ ಶಿಶುಗಳ ಸಾವು, ಪೋಷಕರ ಆಕ್ರೋಶ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಕಳೆದ ೨೪ ಗಂಟೆಯಲ್ಲಿ ಒಂಬತ್ತು ನವಜಾತ ಶಿಶುಗಳು ಮೃತಪಟ್ಟಿವೆ.

ಆಸ್ಪತ್ರೆಯ ಎಸ್‌ಎನ್‌ಸಿಯು ವಾರ್ಡ್‌ನಲ್ಲಿ ಒಂದೇ ದಿನದಲ್ಲಿ ಒಂಬತ್ತು ಕಂದಮ್ಮಗಳು ಪ್ರಾಣ ಬಿಟ್ಟಿದ್ದು, ಪೋಷಕರ ಆಕ್ರಂದನ, ಆಕ್ರೋಶ ಮುಗಿಲು ಮುಟ್ಟಿದೆ.

ವೈದ್ಯಕೀಯ ಕಾಲೇಜು ಅಧಿಕಾರಿಗಳು ತನಿಖಾ ಸಮಿತಿ ರಚಿಸಿ ತನಿಖೆ ನಡೆಸುತ್ತಿದ್ದಾರೆ. ಮಡಿಕಲ್ ಕಾಲೇಜ್‌ನ ಅಧಿಕಾರಿಗಳು ಎಸ್‌ಎನ್‌ಸಿಯು ವಾರ್ಡ್‌ನಲ್ಲಿ 54 ಮಕ್ಕಳಿಗೆ ಚಿಕಿತ್ಸೆ ನೀಡುವ ಸವಲತ್ತು ಇದೆ ಎಂದು ಹೇಳಿಕೊಂಡಿದ್ದಾರೆ. ಆದರೆ 100 ನವಜಾತಶಿಶುಗಳನ್ನು ಅಡ್ಮಿಟ್ ಮಾಡಿಕೊಳ್ಳಲಾಗಿದೆ.

ಒಂದೇ ಕೊಠಡಿಯಲ್ಲಿ ಅತಿ ಹೆಚ್ಚು ಮಕ್ಕಳು ಇರುವ ಕಾರಣ ಇನ್‌ಫೆಕ್ಷನ್ ಹರಡುವ ಸಾಧ್ಯತೆ ಇರುತ್ತದೆ. ಮೃತಪಟ್ಟ ನವಜಾತ ಶಿಶುಗಳಲ್ಲಿ ಹೆಚ್ಚಿನ ಕಂದಮ್ಮಗಳು ಅತಿ ಕಡಿಮೆ ತೂಕ ಹೊಂದಿದ್ದು, ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ.

ಮಕ್ಕಳ ಸಾವಿಗೆ ಆಸ್ಪತ್ರೆ ಹೇಳೋದೇನು?

ನಮ್ಮ ಆಸ್ಪತ್ರೆಯಲ್ಲಿ ಒಂಬತ್ತು ಜವಜಾತ ಶಿಶುಗಳ ಪ್ರಾಣ ಹೋಗಿದೆ ಎನ್ನುವ ಬಗ್ಗೆ ನಮಗೆ ಅರಿವಿದೆ, ಮೃತಪಟ್ಟ ಮಕ್ಕಳಲ್ಲಿ ಹೆಚ್ಚಿನವರು ಅಪೌಷ್ಠಿಕತೆಯಿಂದ ಬಳಲುತ್ತಿದ್ದರು. ಒಂದು ಮಗುವಿಗೆ ಹೃದಯ ಸಂಬಂಧಿ ಕಾಯಿಲೆ ಇತ್ತು, ಅದಕ್ಕೆ ಸೂಕ್ತ ಚಿಕಿತ್ಸೆ ನೀಡುವ ಸೌಕರ್ಯ ನಮ್ಮಲ್ಲಿಲ್ಲ, ಮಗುವಿಗೆ ಚಿಕಿತ್ಸೆ ಕೊಡುವಷ್ಟು ಸಮಯವೂ ಮಗು ಬದುಕಿರಲಿಲ್ಲ ಎಂದು ಕಾಲೇಜಿನ ವೈಸ್ ಪ್ರಿನ್ಸಿಪಾಲ್ ಅಮಿತ್ ಕುಮಾರ್ ಹೇಳಿದ್ದಾರೆ.

ಜನಿಂಗ್‌ಪುರದ ದೊಡ್ಡ ಆಸ್ಪತ್ರೆಯಲ್ಲಿ ರಿನೋವೇಷನ್ ಕೆಲಸ ನಡೆಯುತ್ತಿದೆ. ಆ ಕಾರಣದಿಂದ ಅಲ್ಲಿ ಯಾವುದೇ ರೋಗಿಗಳನ್ನು ಅಡ್ಮಿಟ್ ಮಾಡಿಕೊಳ್ಳುತ್ತಿಲ್ಲ. ಎಲ್ಲರೂ ನಮ್ಮ ಆಸ್ಪತ್ರೆಗೆ ಬಂದಿಲ್ಲ. 600 ಗ್ರಾಂಗಿಂತಲೂ ಕಡಿಮೆ ತೂಕವಿರುವ ಮಕ್ಕಳೂ ಇದ್ದರು. ಅಪೌಷ್ಠಿಕತೆ ಹಾಗೂ ಕಡಿಮೆ ತೂಕದಿಂದಾಗಿ ಮಕ್ಕಳನ್ನು ಉಳಿಸುವುದು ದೊಡ್ಡ ಸವಾಲಾಗಿತ್ತು.

ಅನಿವಾರ್ಯವಾಗಿ ಒಂದು ಬೆಡ್‌ನಲ್ಲಿ ಒಂದಕ್ಕಿಂತ ಹೆಚ್ಚು ಮಕ್ಕಳನ್ನು ಇಡಬೇಕಾಯ್ತು ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!