Tuesday, December 30, 2025

ರಾಯರ ಸನ್ನಿಧಿಯಲ್ಲಿ ಭಕ್ತಿ ಪರಾಕಾಷ್ಠೆ: ಕೇವಲ 20 ದಿನದಲ್ಲಿ ಕೋಟಿ ಕೋಟಿ ಕಾಣಿಕೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಲಿಯುಗದ ಕಾಮಧೇನು, ಕಲ್ಪವೃಕ್ಷ ಶ್ರೀ ರಾಘವೇಂದ್ರ ಸ್ವಾಮಿಗಳ ಸನ್ನಿಧಾನಕ್ಕೆ ಭಕ್ತರು ಭಕ್ತಿಯ ಕಾಣಿಕೆಯನ್ನು ಸಮರ್ಪಿಸಿದ್ದಾರೆ. ಡಿಸೆಂಬರ್ ತಿಂಗಳ ಚಳಿ ಹಾಗೂ ರಜೆಯ ದಿನಗಳಲ್ಲಿ ಮಂತ್ರಾಲಯಕ್ಕೆ ಲಕ್ಷಾಂತರ ಭಕ್ತರು ಭೇಟಿ ನೀಡಿದ್ದು, ಕಳೆದ 20 ದಿನಗಳ ಅವಧಿಯಲ್ಲಿ ಒಟ್ಟು 3.73 ಕೋಟಿ ರೂಪಾಯಿ ಕಾಣಿಕೆ ಸಂಗ್ರಹವಾಗಿದೆ.

ಮಠದಲ್ಲಿ ಇತ್ತೀಚೆಗೆ ನಡೆದ ಹುಂಡಿ ಎಣಿಕೆ ಕಾರ್ಯದಲ್ಲಿ ಈ ಬೃಹತ್ ಮೊತ್ತದ ಲೆಕ್ಕ ಸಿಕ್ಕಿದೆ. ಇದರ ಸಂಪೂರ್ಣ ವಿವರ ಇಲ್ಲಿದೆ:

ಒಟ್ಟು ನಗದು: ರೂ. 3,73,66,587

ಕರೆನ್ಸಿ ನೋಟುಗಳು: ರೂ. 3,62,69,247

ನಾಣ್ಯಗಳು: ರೂ. 10,97,340

ಚಿನ್ನ: 87 ಗ್ರಾಂ

ಬೆಳ್ಳಿ: 910 ಗ್ರಾಂ

ಮಠದ ನೂರಾರು ಸಿಬ್ಬಂದಿ, ಭಜನಾ ಮಂಡಳಿಯ ಸದಸ್ಯರು ಹಾಗೂ ಕರಸೇವಕರು ಅತ್ಯಂತ ಶಿಸ್ತುಬದ್ಧವಾಗಿ ಹುಂಡಿ ಎಣಿಕೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ವರ್ಷದ ಕೊನೆಯ ತಿಂಗಳಲ್ಲಿ ಭಕ್ತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದ್ದು, ಮಂತ್ರಾಲಯದ ಇತಿಹಾಸದಲ್ಲಿ ಇದೊಂದು ಪ್ರಮುಖ ದಾಖಲೆಯಾಗಿದೆ.

error: Content is protected !!