ಹೊಸದಿಗಂತ ವರದಿ ಹುಬ್ಬಳ್ಳಿ:
ಕೆಲಸ ಮಾಡಲು ಹೋಗು ಎಂಬ ವಿಚಾರಕ್ಕೆ ವ್ಯಕ್ತಿ ಓರ್ವ ತನ್ನ ಪತ್ನಿಯನ್ನು ಮಾರಕಾಸ್ತ್ರದಿಂದ ಕೊಲೆ ಮಾಡಿ ತಾನು ಸಹ ನೇಣು ಹಾಕಿಕೊಂಡು ಮೃತಪಟ್ಟ ಘಟನೆ ಹಳೇ ಹುಬ್ಬಳ್ಳಿ ಇಸ್ಲಾಂ ಪುರದಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದೆ. ಸಾಹಿಸ್ತಾ ಬೇಪಾರಿ(25) ಹತ್ಯೆಯಾದ ಮಹಿಳೆ ಹಾಗೂ ಮಲ್ಲಿಕ್ ನೇಣುಹಾಕಿಕೊಂಡು ಮೃತಪಟ್ಟಿದ್ದಾನೆ.
ಸೆಂಟ್ರಿಂಗ್ ಉದ್ಯೋಗ ಮಾಡುತ್ತಿದ್ದ ಮಲ್ಲಿಕ್ ಕೆಲಸಕ್ಕೆ ಹೋಗದೆ ಮನೆಯಲ್ಲಿ ಇರುತ್ತಿದ್ದ. ಈ ವಿಚಾರವಾಗಿ ಸಾಹಿಸ್ತಾ ನಡುವೆ ಬೆಳಗ್ಗೆ ಜಗಳ ಆರಂಭವಾಗಿದೆ. ಅದು ವಿಕೋಪಕ್ಕೆ ಹೋಗಿ ಮಲ್ಲಿಕ್ ಅವಳಿಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿದಲ್ಲದೇ ತಾನು ಸಹ ಮನೆಯ ಮಹಡಿಯ ಕಬ್ಬಿಣದ ಎಂಗ್ಲರ್ ಗೆ ನೇಣು ಹಾಕಿಕೊಂಡು ಮೃತಪಟ್ಟಿದ್ದಾನೆ. ಸ್ಥಳಕ್ಕೆ ಕಸಬಾಪೇಟ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ, ಮೃತ ದೇಹಗಳ ಕಿಮ್ಸ್ ಶವಗಾರಕ್ಕೆ ರವಾನಿಸಿದರು. ಯಾವ ಕಾರಣಕ್ಕೆ ಘಟನೆಯಾಗಿದೆ ಎಂಬುವುದು ನಿಖರವಾದ ಮಾಹಿತಿ ದೊರೆಕಿಲ್ಲ.ತನಿಖೆಯಿಂದ ಗೊತ್ತಾಗಲಿದೆ ಎಂದು ಪೊಲೀಸರು ತಿಳಿಸಿದರು.
ಕೆಲಸಕ್ಕೆ ಹೋಗು ಎಂಬ ವಿಚಾರಕ್ಕೆ ಇಬ್ಬರ ನಡುವೆ ಜಗಳವಾಗುತ್ತಿತ್ತು. ಬೆಳಗ್ಗೆ ಜಗಳವಾಡುವಾದ ನಾವೇಲ್ಲರೂ ಸೇರಿ ಜಗಳ ಬಿಡಿಸಿ ಬಂದಿದ್ದೇವು. ಆದರೆ ಮನೆಯ ಬೀಗ ಹಾಕಿಕೊಂಡು ಈ ರೀತಿ ಮಾಡಿಕೊಂಡಿದ್ದಾರೆ ಎಂದು ಕುಟುಂಬದವರಾದ ನಸರಿನ್ ಹೇಳಿದರು. ಕೊಲೆಯಾದ ಸಾಹಿಸ್ತಾಗೆ ಬೈಲಹೊಂಗಲ ಹುಡುಗನ ಜೊತೆ ಮದುವೆಯಾಗಿತ್ತು. ಅವಳಿಗೆ ಎರಡು ಮಕ್ಕಳು ಸಹ ಇದ್ದರು. ಆದರೆ ಅವಳ ಗಂಡ ಮೃತಪಟ್ಟನಂತರ ಅವಳಿಗೆ ಮಲ್ಲಿಕ್ ನೊಂದಿಗೆ ಎರಡನೇ ಮದುವೆ ಮಾಡಲಾಗಿತ್ತು. ಇಬ್ಬರ ನಡುವೆ ಪದೇ ಪದೇ ಜಗಳವಾಗುತ್ತಿತ್ತು ಎಂದು ಅಕ್ಕಪಕ್ಕದ ಮನೆಯವರು ಹೇಳುತ್ತಿದ್ದಾರೆ. ಆದರೆ ನಿಜವಾದ ಕಾರಣ ಗೊತ್ತಿಲ್ಲ ಎಂದು ಸ್ಥಳೀಯ ನಿವಾಸಿ ಹಜತ್ ಅಲಿ ತಿಳಿಸಿದರು.