ಸುವರ್ಣಸೌಧದಿಂದ ಸಾವರ್ಕರ್ ಜೊತೆಗೆ ಗಾಂಧೀಜಿ ಫೋಟೋ ತೆಗೆಯಬೇಕು: ಚೇತನ್ ಅಹಿಂಸಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಳಗಾವಿಯ ಸುವರ್ಣಸೌಧದಲ್ಲಿ ವಿ.ಡಿ ಸಾವರ್ಕರ್ ಜೊತೆಗೆ ಮಹಾತ್ಮಾ ಗಾಂಧೀಜಿ ಫೋಟೋ ಕೂಡ ತೆರವು ಮಾಡಬೇಕು ಎಂದು ಹೇಳುವ ಮೂಲಕ ಸ್ಯಾಂಡಲ್‌ವುಡ್ (Sandalwood) ನಟ ಚೇತನ್ ಅಹಿಂಸಾ (Chethan Ahimsa) ಹೊಸ ವಿವಾದಕ್ಕೆ ನಾಂದಿ ಹಾಡಿದ್ದಾರೆ.

ಸಚಿವ ಪ್ರಿಯಾಂಕ್ ಖರ್ಗೆ (Priyanka Karge) ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ನಟ ಚೇತನ್, ಸಾವರ್ಕರ್ ಮತ್ತು ಗಾಂಧೀಜಿ ಇಬ್ಬರ ಫೋಟೋ ತೆಗೆಯಬೇಕು ಎಂದಿದ್ದಾರೆ.

ಸುವರ್ಣ ಸೌಧದಿಂದ ಸಾವರ್ಕರ್ ಫೋಟೋ ತೆಗೆದರೆ ಸೂಕ್ತ. ನನ್ನ ಬಿಟ್ಟರೆ ಇವತ್ತೇ ತೆಗೆಯುತ್ತೇನೆ ಎಂದು ಪ್ರಿಯಾಂಕಾ ಖರ್ಗೆ ಹೇಳಿದ್ದಾರೆ. ಕಾಂಗ್ರೆಸ್ ಮತ್ತು ಖರ್ಗೆಯವರಿಗೆ ಸಾವರ್ಕರ್ ಸೈದ್ಧಾಂತಿಕ ಶತ್ರುವಾಗಿರಬಹುದು. ನಮ್ಮಂತ ಸಮಾನತಾವಾದಿಗಳಿಗೆ, ಸಾವರ್ಕರ್ ಮತ್ತು ಗಾಂಧಿ ಇಬ್ಬರೂ ನಮ್ಮ ಸೈದ್ಧಾಂತಿಕ ಶತ್ರುಗಳು ಎಂದು ಚೇತನ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ನೀವು ಸಾವರ್ಕರ್ ಮತ್ತು ಗಾಂಧಿ ಇಬ್ಬರ ಫೋಟೋಗಳನ್ನು ತೆಗೆದುಹಾಕುವುದು ಸೂಕ್ತ ಎಂದು ಚೇತನ್ ಪ್ರತಿಕ್ರಿಯಿಸಿದ್ದಾರೆ. ಇಲ್ಲವಾದರೆ, ಇಬ್ಬರನ್ನೂ ಇಟ್ಟುಕೊಳ್ಳಿ ಮತ್ತು ಸುವರ್ಣ ಸೌಧದಲ್ಲಿ ಕನ್ನಡಿಗ ತಂದೆ ಪೆರಿಯಾರ್ ಅವರ ಭಾವಚಿತ್ರವನ್ನು ಸೇರಿಸಿ ಎಂದು ಚೇತನ್ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!