ಕಾರ್ -ಟ್ರಕ್ ಡಿಕ್ಕಿಯಾದ ರಭಸಕ್ಕೆ ಕಾಣಿಸಿಕೊಂಡ ಬೆಂಕಿ: ಮಗು ಸೇರಿ 8 ಮಂದಿ ಸಜೀವ ದಹನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕಾರೊಂದು ಟ್ರಕ್‌ ಗೆ ಡಿಕ್ಕಿಯಾಗಿ ಬೆಂಕಿಗಾಹುತಿಯಾದ ಘಟನೆ ಉತ್ತರ ಪ್ರದೇಶದ ಬರೇಲಿ-ನೈನಿತಾಲ್ ಹೆದ್ದಾರಿಯಲ್ಲಿ ಶನಿವಾರ ರಾತ್ರಿ ನಡೆದಿದ್ದು, ಒಂದು ಮಗು ಸಹಿತ ಎಂಟು ಮಂದಿ ಈ ಅವಘಡದಲ್ಲಿ ಸಜೀವ ದಹನಗೊಂಡಿದ್ದಾರೆ.

ಉತ್ತರಾಖಂಡದ ಕಿಚ್ಚಾದಿಂದ ಮರಳು ಹಾಗೂ ಜಲ್ಲಿ ಸಾಗಾಟ ನಡೆಸುತ್ತಿದ್ದ ಟ್ರಕ್ ಭೋಜಿಪುರ ಸಮೀಪ ಕಾರಿಗೆ ಡಿಕ್ಕಿಯಾಗಿದೆ. ಈ ವೇಳೆ ಕಾರಿಗೆ ಹಠಾತ್ ಬೆಂಕಿ ಹತ್ತಿಕೊಂಡಿದ್ದು, ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಭಾರೀ‌ ಸಾಹಸಪಟ್ಟು ಬೆಂಕಿ‌ ನಂದಿಸುವಲ್ಲಿ ಯಶಸ್ವಿಯಾದರು. ಅದರೆ ಕ್ಷಣಾರ್ಧದಲ್ಲಿ‌ ನಡೆದ ಈ ಘಟನೆಯಿಂದಾಗಿ ಕಾರಿನ ಒಳಗಿದ್ದವರು ಹೊರಗೆ ಬರಲಾರದೆ ಆ ವೇಳೆಗಾಗಲೇ ಸುಟ್ಟು ಕರಕಲಾಗಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಮೃತರ ವಿವರಗಳು ಇನ್ನಷ್ಟೇ ತಿಳಿದು ಬರಬೇಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!