ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಾರ್ಖಂಡ್ನಲ್ಲಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಆರು ಸೈಬರ್ ಅಪರಾಧಿಗಳು ನೀರಿಗೆ ಹಾರಿದ್ದಾರೆ.
ಸೈಬರ್ ಅಪರಾಧದಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಬಂಧಿಸುವಾಗ ನದಿಗೆ ಹಾರಿದ್ದಾರೆ. ಸಾಮಾನ್ಯರಂತೆ ಬಟ್ಟೆ ಧರಿಸಿ ಪೊಲೀಸ್ ಅಧಿಕಾರಿಗಳು ಸೈಬರ್ ಅಪರಾಧಿಗಳನ್ನು ಹಿಡಿಯುವ ಪ್ರಯತ್ನ ಮಾಡಿದ್ದರು.
ಪೊಲೀಸ್ ಎಂದು ಗೊತ್ತಾಗುತ್ತಿದ್ದಂತೆಯೇ ಅಪರಾಧಿಗಳು ಕಾಲ್ಕಿತ್ತಿದ್ದಾರೆ. ನೀರಿಗೆ ಹಾರಿದ್ದಾರೆ. ನೀರಿಗೆ ಬಿದ್ದರೂ ಬಿಡದ ಪೊಲೀಸ್ ಅಧಿಕಾರಿಗಳನ್ನು ಸೈಬರ್ ಅಪರಾಧಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳಿಂದ 8,29,600 ರೂಪಾಯಿ ನಗರದು, 12 ಫೋನ್, 21 ಎಟಿಎಂ ಕಾರ್ಡ್ಗಳು, 19 ಸಿಮ್ ಕಾರ್ಡ್ ಹಾಗೂ 12 ಪಾಸ್ಬುಕ್ಗಳನ್ನು ವಶಪಡಿಸಿಕೊಳ್ಳಲಾಗಿದೆ.