ಧಿಡೀರ್ ಮಾಡುವ ಅಡುಗೆಯಲ್ಲಿ ಇದೂ ಒಂದು. ಗೆಸ್ಟ್ ಬಂದಾಗ, ಸಂಜೆಯ ಸ್ನಾಕ್ಸ್‌ಗೆ ಈ ಕ್ಯಾಬೇಜ್ ರೋಲ್ ಹೇಳಿ ಮಾಡಿದ ಅಡುಗೆ. ಬನ್ನಿ ಹಾಗಾದ್ರೆ. ಕ್ಯಾಬೇಜ್ ರೋಲ್ ಮಾಡೋದು ಹೇಗಂತ ನೋಡೋಣ.
ಬೇಕಾಗುವ ಸಾಮಾಗ್ರಿ:
ಕಾರ್ನ್ ಫ್ಲೋರ್ 2 ಚಮಚ, ಮೈದಾಹಿಟ್ಟು 2 ಚಮಚ, ಸೋಡಾ 3 ಚಿಟಿಕಿ, ಉಪ್ಪು ರುಚಿಗೆ ಬೇಕಾದಷ್ಟು, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಅರ್ಧ ಚಮಚ, ಹೆಚ್ಚಿದ ನೀರುಳ್ಳಿ ಅರ್ಧಕಪ್, ಹೆಚ್ಚಿದ ಕೊತ್ತಂಬರಿ ಸೊಪ್ಪು ಕಾಲು ಕಪ್, ಸಣ್ಣಗೆ ಹೆಚ್ಚಿದ ಹಸಿಮೆಣಸಿನ ಕಾಯಿ 2 ಸ್ಪೂನ್, ಚಾಟ್ ಮಸಾಲ ಅರ್ಧ ಚಮಚ, ಮೆಣಸಿನ ಹುಡಿ ಅರ್ಧ ಚಮಚ, ಗರಂ ಮಸಾಲ ಅರ್ಧ ಚಮಚ, ನಿಂಬೆ ರಸ 4 ಟೀ ಸ್ಪೂನ್, ಕಡ್ಲೆಹಿಟ್ಟು ಎರಡು ಚಮಚ, ಶುದ್ಧ ತೆಂಗಿನೆಣ್ಣೆ, ಎಲೆಕೋಸಿನ ಎಲೆಗಳು 10 ಕಾರ್ನ್ ಫ್ಲೋರ್, ಮೈದಾಹಿಟ್ಟು , ಸೋಡಾ , ಉಪ್ಪು ರುಚಿಗೆ ಬೇಕಾದಷ್ಟು, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಇವೆಲ್ಲವನ್ನು ಸ್ವಲ್ಪ ನೀರು ಸೇರಿಸಿ ಬೋಂಡಾ ಹಿಟ್ಟಿನ ಹದಕ್ಕೆ ಕಲೆಸಿಟ್ಟುಕೊಳ್ಳಿ.
ಹೆಚ್ಚಿದ ನೀರುಳ್ಳಿ ಅರ್ಧಕಪ್, ಹೆಚ್ಚಿದ ಕೊತ್ತಂಬರಿ ಸೊಪ್ಪು ಕಾಲು ಕಪ್, ಸಣ್ಣಗೆ ಹೆಚ್ಚಿದ ಹಸಿಮೆಣಸಿನ ಕಾಯಿ 2 ಸ್ಪೂನ್, ಚಾಟ್ ಮಸಾಲ ಅರ್ಧ ಚಮಚ, ಮೆಣಸಿನ ಹುಡಿ ಅರ್ಧ ಚಮಚ, ಗರಂ ಮಸಾಲ ಅರ್ಧ ಚಮಚ, ನಿಂಬೆ ರಸ 4 ಟೀ ಸ್ಪೂನ್, ಕಡ್ಲೆಹಿಟ್ಟು ಎರಡು ಚಮಚ ಇವೆಲ್ಲವನ್ನು ಮಿಶ್ರಮಾಡಿ ಮಿಶ್ರಣ ಸಿದ್ಧಪಡಿಸಿ.
ಮಸಾಲೆ ಮಿಶ್ರಣವನ್ನು ಎಲೆಕೋಸಿನ ಎಲೆಗಳ ಒಳಗಿಟ್ಟು ರೋಲ್ ಮಾಡಿ, ಬೋಂಡ ಹಿಟ್ಟಿನ ಹದಕ್ಕೆ ಕಲಸಿದ ಹಿಟ್ಟಿನಲ್ಲಿ ಅದ್ದಿ ಕಾದ ಎಣ್ಣೆಗೆ ಹಾಕಿ ಕರಿಯಬೇಕು. ರುಚಿ ರುಚಿಯಾದ ಕ್ಯಾಬೇಜ್ ರೋಲ್ ರೆಡಿ!