ಕಾಶ್ಮೀರ ಪ್ರತಿಯೊಬ್ಬ ಭಾರತೀಯರಿಗೆ, ಭಾರತ ಕಾಶ್ಮೀರಿಗರಿಗೆ ಸೇರಿದೆ: ರಾಜ್ಯಸಭೆಯಲ್ಲಿ ಅಮಿತ್ ಶಾ 

ಹೊಸದಿಗಂತ ಡಿಜಿಟಲ್ ಡೆಸ್ಕ್:

ಲೋಕಸಭೆಯಲ್ಲಿ ಅಂಗೀಕಾರ ಪಡೆದ ಜಮ್ಮು ಮತ್ತು ಕಾಶ್ಮೀರ ಮೀಸಲಾತಿ ಮಸೂದೆಯನ್ನು ರಾಜ್ಯಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಡಿಸಿದ್ದಾರೆ.

ಇದೇ ವೇಳೆ ಆರ್‌ಜೆಡಿ ಸಂಸದ ಮನೋಜ್ ಕುಮಾರ್ ಝಾ ಮಹತ್ವದ ಹೇಳಿಕೆ ನೀಡಿದ್ದು, ಕಾಶ್ಮೀರದ ಪರವಾಗಿ ಬಿಲ್ ಮಂಡಿಸುವಾಗ ಈ ಸದನದಲ್ಲಿ ಕಣಿವೆ ರಾಜ್ಯದ ಪರವಾಗಿ ಯಾರೂ ಇಲ್ಲ ಎಂದಿದ್ದಾರೆ.

ಈ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಅಮಿತ್ ಶಾ, ನಿಮ್ಮ ವಿಚಾರವನ್ನು ಹೇಳುತ್ತಿದ್ದೀರಿ. ನಾವು ಯಾವತ್ತೂ ಕಾಶ್ಮೀರೀಗರ ಪರವಾಗಿ ನಿಂತಿದ್ದೇವೆ. ಕಾಶ್ಮೀರ ಪ್ರತಿಯೊಬ್ಬ ಭಾರತೀಯನಿಗೆ ಸೇರಿದೆ. ಅದೇ ರೀತಿ ಭಾರತ ದೇಶ ಪ್ರತಿಯೊಬ್ಬ ಕಾಶ್ಮೀರಿಗೆ ಸೇರಿದೆ ಎಂದು ಶಾ ಚಾಟಿ ಬೀಸಿದರು .

ಕಾಶ್ಮೀರ ಮೀಸಲಾತಿ ಮಸೂದೆ ಮಂಡಿಸಿದ ಬೆನ್ನಲ್ಲೇ ಮನೋಜ್ ಕುಮಾರ್, ಈ ಸದನದಲ್ಲಿ ಇಂದು ಕಾಶ್ಮೀರದ ಪರವಾಗಿ ಯಾರೂ ಇಲ್ಲ ಎಂದಿದ್ದಾರೆ. ತಕ್ಷಣವೇ ಎದ್ದು ನಿಂತ ಅಮಿತ್ ಶಾ, ಈ ಮಾತನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ಸಭಾಧ್ಯಕ್ಷರ ಮೂಲಕ ಸ್ಪಷ್ಟ ಸಂದೇಶ ರವಾನಿಸಿ, ಸಂದರು ತಮ್ಮ ಬಗ್ಗೆ ಹೇಳುತ್ತಿದ್ದಾರೆ. ಆದರೆ ನೀವು ನಮ್ಮ ಬಗ್ಗೆ ಯಾಕೆ ಹೇಳುತ್ತಿದ್ದೀರಿ? ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ, ದ್ವಾರಕದಿಂದ ಈಶಾನ್ಯ ರಾಜ್ಯಗಳವರೆಗಿನ ಜನರಿಗೆ ಕಾಶ್ಮೀರ ಸೇರಿದೆ. ಅದೇ ರೀತಿ ಪ್ರತಿಯೊಬ್ಬ ಕಾಶ್ಮೀರಿಗೆ ಭಾರತ ಸೇರಿದೆ ಎಂದು ಅಮಿತ್ ಶಾ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!