ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೆನ್ನಾಗರ ಕೆರೆ ಒತ್ತುವರಿ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದಂತೆಯೇ ಜಿಲ್ಲಾಡಳಿತ ಹಿಂದೆಂದೂ ತೆಗೆದುಕೊಳ್ಳದ ಕ್ರಮವನ್ನು ತೆಗೆದುಕೊಂಡಿದೆ.
ಬೆಂಗಳೂರಿನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕೆರೆಯ ಒಳಗಡೆಗೆ ಪ್ರವೇಶಿಸುವ ಮಾರ್ಗಗಳನ್ನು ಜಿಲ್ಲಾಡಳಿತ ಬಂದ್ ಮಾಡಿದೆ.
ತಹಶೀಲ್ದಾರರು ದೂರು ನೀಡಿದ ತಕ್ಷಣವೇ ಖಾಸಗಿ ಕಂಪನಿ ವಿರುದ್ಧ ಕ್ರಮಕ್ಕೆ ಪೊಲೀಸರು ಮುಂದಾಗಿದ್ದಾರೆ. ಸದ್ಯಕ್ಕೆ ಜಿಗಣಿ ಪೊಲೀಸರು ಕೆರೆ ಪ್ರವೇಶದ್ವಾರಗಳನ್ನು ಮುಚ್ಚಿದ್ದಾರೆ.
ಖಾಸಗಿ ಕಂಪನಿಯೊಂದು ಜಿಗಣಿಯ ಹೆನ್ನಾಗರ ಕೆರೆಯನ್ನು ಒತ್ತುವರಿ ಮಾಡಿದೆ, ಕೆರೆ ಒಳಗೆ ಮಣ್ಣು ತುಂಬಿಸಿ ಮುಚ್ಚುವ ಪ್ರಯತ್ನ ಮಾಡಿದೆ. ಈ ವಿಡಿಯೋ ಎಲ್ಲೆಡೆ ವೈರಲ್ ಆದ ನಂತರ ತಹಸೀಲ್ದಾರ್ ಪೊಲೀಸರಿಗೆ ದೂರು ನೀಡಿದ್ದಾರೆ. ಇದೀಗ ಕೆರೆ ಪ್ರವೇಶಿಸುವ ಎಲ್ಲಾ ದ್ವಾರಗಳನ್ನು ಕಬ್ಬಿಣದ ಸರಳುಗಳು ಹಾಗೂ ಬ್ಯಾರಿಕೇಡ್ ಹಾಕಿ ಬಂದ್ ಮಾಡಲಾಗಿದೆ.