VIDEO | ‘ಅಪ್ಪಾ, ಅಪ್ಪಾ.. ಸ್ವಾಮಿ ಅಪ್ಪನ್ನ ಹುಡುಕಿಕೊಡಿ..’ ಶಬರಿಮಲೆಯಲ್ಲಿ ಪುಟ್ಟಸ್ವಾಮಿ ಕಣ್ಣೀರು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶಬರಿಮಲೆಯಲ್ಲಿ ಈ ಬಾರಿ ಹಿಂದೆಂದಿಗಿಂತಲೂ ಹೆಚ್ಚೇ ಜನದಟ್ಟಣೆ ಇದೆ.

ಕಳೆದ ಐದು ದಿನಗಳಿಂದ ಶಬರಿಮಲೆಯಲ್ಲಿ ಕಾಲಿಡಲೂ ಜಾಗವಿಲ್ಲದಷ್ಟು ಭಕ್ತರು ಆಗಮಿಸಿದ್ದಾರೆ. ದೇವಾಲಯ ಮಂಡಳಿ ಭಕ್ತರಿಗೆ ಬೇಕಾದ ಎಲ್ಲ ಸೌಕರ್ಯಗಳನ್ನು ಒದಗಿಸುವಲ್ಲಿ ವಿಫಲವಾಗಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭದಲ್ಲೇ ಪುಟ್ಟಸ್ವಾಮಿಯೊಬ್ಬನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಅಪ್ಪನೊಂದಿಗೆ ಮಾಲೆ ಧರಿಸಿ ಬಂದಿದ್ದ ಪುಟ್ಟಸ್ವಾಮಿ ನೂಕು ನುಗ್ಗಲಿನಲ್ಲಿ ತಂದೆಯಿಂದ ಬೇರೆಯಾಗಿದ್ದಾನೆ. ಇದರಿಂದ ಬಾಲಕ ಕಣ್ಣೀರಿಟ್ಟಿದ್ದು, ಅಪ್ಪಾ ಅಪ್ಪಾ ಎಂದು ಅತ್ತಿದ್ದಾನೆ. ಅಪ್ಪನನ್ನು ಹುಡುಕಿಕೊಡಿ ಎಂದು ಪೊಲೀಸರ ಬಳಿ ಮನವಿ ಮಾಡಿದ್ದಾನೆ.

ದೊಡ್ಡ ಪ್ರಪಂಚದಲ್ಲಿ ತನ್ನಪ್ಪನನ್ನು ಕಾಣದೇ ಆತಂಕಕ್ಕೀಡಾಗಿದ್ದಾನೆ. ವೈರಲ್ ಆದ ವಿಡಿಯೋ ಇಲ್ಲಿದೆ ನೋಡಿ..

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!