ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್‌ನಲ್ಲಿ ರಣಬೀರ್ ಕಪೂರ್ ನಟನೆಯ ಮುಂದಿನ ಎರಡು ಬಹುನಿರೀಕ್ಷಿತ ಸಿನಿಮಾಗಳ ಬಗ್ಗೆ ಹೊಸ ಚರ್ಚೆ ಶುರುವಾಗಿದೆ. ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ‘ಲವ್ ಅಂಡ್ ವಾರ್’ ಹಾಗೂ ನಿತೇಶ್ ತಿವಾರಿ ಅವರ ‘ರಾಮಾಯಣ’ ಚಿತ್ರಗಳ ಬಿಡುಗಡೆಯ ಸಮಯದಲ್ಲಿ ಬದಲಾವಣೆ ಆಗುವ ಸಾಧ್ಯತೆ ಕಂಡುಬಂದಿದ್ದು, ಅಭಿಮಾನಿಗಳ ನಿರೀಕ್ಷೆಗೆ ತಾತ್ಕಾಲಿಕ ವಿರಾಮ ಬೀಳುವ ಲಕ್ಷಣಗಳು ಗೋಚರಿಸುತ್ತಿವೆ.
ಆರಂಭದಲ್ಲಿ ‘ಲವ್ ಅಂಡ್ ವಾರ್’ ಚಿತ್ರವನ್ನು 2026ರ ಈದ್ ಹಬ್ಬಕ್ಕೆ ಬಿಡುಗಡೆ ಮಾಡುವ ಯೋಜನೆ ಇತ್ತು. ಬಳಿಕ ಮಾರ್ಚ್ 2026ಕ್ಕೆ ಸಿನಿಮಾ ಬರಬಹುದು ಎಂಬ ಮಾತುಗಳು ಕೇಳಿಬಂದವು. ಆದರೆ ಈಗ ಲಭ್ಯವಾಗಿರುವ ವರದಿಗಳ ಪ್ರಕಾರ, ಚಿತ್ರದ ಶೂಟಿಂಗ್ ಮೇ 2026ರವರೆಗೆ ಮುಂದುವರಿಯಲಿದ್ದು, ಬಿಡುಗಡೆಯೂ ಮತ್ತಷ್ಟು ತಡವಾಗುವ ಲಕ್ಷಣಗಳಿವೆ.
ರಣಬೀರ್ ಕಪೂರ್, ಆಲಿಯಾ ಭಟ್ ಮತ್ತು ವಿಕ್ಕಿ ಕೌಶಲ್ ಮೂವರು ನಟರು ಮೇ 2026ರವರೆಗೆ ತಮ್ಮ ಡೇಟ್ಸ್‌ಗಳನ್ನು ಇದೇ ಚಿತ್ರಕ್ಕಾಗಿ ಮೀಸಲಿಟ್ಟಿದ್ದಾರೆ ಎನ್ನಲಾಗಿದೆ. ಈ ಕಾರಣದಿಂದ ಅವರ ಮುಂದಿನ ಪ್ರಾಜೆಕ್ಟ್‌ಗಳಿಗೂ ವಿಳಂಬವಾಗುವ ಸಾಧ್ಯತೆ ಇದೆ. ಹೀಗಾಗಿ ಆಗಸ್ಟ್ ಅಥವಾ ಸೆಪ್ಟೆಂಬರ್ 2026ರಲ್ಲಿ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ.

