ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭೆಯ ಭದ್ರತಾ ಲೋಪ ಎಸಗಿದ ಪ್ರಕರಣದಲ್ಲಿ ಇಬ್ಬರು ಆರೋಪಿಗಳು ಹೊಸ ಸಂಸತ್ತು ವೀಕ್ಷಿಸುವ ನೆಪದಲ್ಲಿ ಪಾಸ್‌ಗಳನ್ನು ಪಡೆದಿದ್ದರು. ಈ ಪಾಸ್ ಪಡೆಯಲು ಓರ್ವ ಆರೋಪಿ ಮೈಸೂರು ಸಂಸದ ಪ್ರತಾಪ್ ಸಿಂಹ ಅವರ ಕಚೇರಿಗೆ ಅಲೆಯುತ್ತಿದ್ದ ಎಂದು ವರದಿಯಾಗಿದೆ.ಜೊತೆಗೆ ಸಾಗರ್ ಶರ್ಮಾಗೆ ತಮ್ಮ ಹೆಸರಿನಲ್ಲಿ ನೀಡಿದ ಪಾಸ್ ಬಗ್ಗೆ ಲಿಖಿತ ಉತ್ತರ ನೀಡುವಂತೆ ಪ್ರತಾಪ್ ಸಿಂಹ ಅವರಿಗೆ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಸೂಚಿಸಿದ್ದಾರೆ.
ಅಧಿಕೃತ ಪಾಸ್ ಪಡೆದ ಆರೋಪಿಗಳಲ್ಲಿ ಒಬ್ಬರಾದ ಮನೋರಂಜನ್.ಡಿ ತನ್ನ ಸಹಚರನಾದ ಸಹ ಆರೋಪಿ ಸಾಗರ್ ಶರ್ಮಾನನ್ನು ಸಂಸದರ ಕಚೇರಿಯಲ್ಲಿ ಸ್ನೇಹಿತ ಎಂದು ಪರಿಚಯಿಸಿ ಪಾಸ್ ಪಡೆದಿದ್ದರೆ, ಮೊದಲ ವಿಚಾರಗಳ ಕುರಿತುಮಾಹಿತಿ ಕಲೆಹಾಕಲಾಗುತ್ತಿದೆ.
ಒಟ್ಟು ಮೂರು ಪಾಸ್‌ಗಳನ್ನು ನೀಡಲಾಗಿತ್ತು.ಮನೋರಂಜನ್ ಮೂರು ತಿಂಗಳಿನಿಂದ ಪಾಸ್‌ಗಾಗಿ ಪ್ರತಾಪ್ ಸಿಂಹ ಮತ್ತು ಅವರ ಕಚೇರಿಗೆ ಅಲೆದಾಡುತ್ತಿದ್ದ ಎಂದು ಸುದ್ದಿಸಂಸ್ಥೆ ಪಿಟಿಐ ವರದಿ ಮಾಡಿದೆ.