ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭೆಯ ಭದ್ರತಾ ಲೋಪ ಎಸಗಿದ ಪ್ರಕರಣ ಸಂಬಂಧ ದಾಳಿ ನಡೆಸಿರುವ ಆರೋಪಿಗಳಿಗೆ 10 ಲಕ್ಷ ರೂ. ಬಹುಮಾನ ನೀಡುವುದಾಗಿ ಖಲಿಸ್ತಾನಿ ಉಗ್ರ ಗುರುಪತ್ವಂತ್ ಪನ್ನು ಘೋಷಣೆ ಮಾಡಿದ್ದಾನೆ.
ಸಿಖ್ಸ್ ಫಾರ್ ಜಸ್ಟೀಸ್ ಜನರಲ್ ಕೌನ್ಸೆಲ್ ಮತ್ತು ಭಯೋತ್ಪಾದಕ ಗುರುಪತ್ವಂತ್ ಪನ್ನು ಭಾಗಿಯಾಗಿರುವರಿಗೆ 10 ಲಕ್ಷ ರೂ.ಗಳ ಕಾನೂನು ಸಹಾಯವನ್ನು ಘೋಷಿಸಿದ್ದಾನೆ.
‘ಡಿಸೆಂಬರ್ 13 ರಂದು ಸಂಸತ್ತಿನ ಅಡಿಪಾಯವನ್ನು ಅಲುಗಾಡಿಸಲಾಗಿದೆ ಮತ್ತು ಖಲಿಸ್ತಾನ್ ಜನಮತಗಣನೆಗಾಗಿ ಮತದಾರರ ನೋಂದಣಿ ಪ್ರಾರಂಭವಾಗುವುದರೊಂದಿಗೆ ಅಲುಗಾಡುತ್ತಲೇ ಇರುತ್ತದೆ” ಎಂದು ಪನ್ನು ಹೇಳಿದ್ದಾನೆ.
ಇತ್ತೀಚೆಗೆ ಸಂಸತ್ತಿನ ಮೇಲೆ ದಾಳಿ ಮಾಡುವುದಾಗಿಪನ್ನು ಬೆದರಿಕೆ ಹಾಕುವ ವೀಡಿಯೊ ಸಂದೇಶವನ್ನು ನೀಡಿದ್ದನು.
ಎಲ್ಲಾ ಆರು ಆರೋಪಿಗಳು ಮತ್ತು ಖಲಿಸ್ತಾನ್ ಚಳವಳಿಯ ನಡುವಿನ ಯಾವುದೇ ಸಂಬಂಧವನ್ನು ಇಲ್ಲಿಯವರೆಗೆ ಬಹಿರಂಗಪಡಿಸಲಾಗಿಲ್ಲ.