ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಇಂದಿನಿಂದ ಮೂಡಬಿದಿದ್ರೆಯ ಆಳ್ವಾಸ್ ಅಂಗಣದಲ್ಲಿ ನಾಲ್ಕು ದಿನಗಳ ಕಾಲ ‘ಆಳ್ವಾಸ್ ವಿರಾಸತ್’ ಸಂಭ್ರಮ.ಈ ಕ್ಷಣಕ್ಕೆ ದೇಶದ ವಿವಿಧೆಡೆಯಿಂದ ಕಲಾ ಪ್ರೇಮಿಗಳು ಸಾಕ್ಷಿಯಾಗಲಿದ್ದಾರೆ.
ಬಣ್ಣದ ಚಿತ್ತಾರಗಳಿಂದ ಕಂಗೊಳಿಸುತ್ತಿರುವ ಆಳ್ವಾಸ್ ಎಂಬ ಶಿಕ್ಷಣ ಕಾಶಿಯಲ್ಲಿ ಇನ್ನು ನಾಲ್ಕು ದಿನಗಳ ಕಾಲ ಸಂಗೀತದ ರಸದೌತಣವೂ ದೊರೆಯಲಿದೆ.
ಪ್ರತಿದಿನ ಸಂಜೆ 5 ರಿಂದ ರಾತ್ರಿ 10 ಗಂಟೆಯವರೆಗೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರನ್ನು ಮೂಕವಿಸ್ಮಿತರನ್ನಾಗಿ ಮಾಡಲಿವೆ. ಗಾನ ವೈಭವ, ಭಾವಲಹರಿ, ಸಂಗೀತ ರಸ ಸಂಜೆ ವಿಶೇಷ ಗಮನಸೆಳೆಯಲಿದೆ. ಇನ್ನು ಹಗಲು ಹೊತ್ತಿನಲ್ಲಿ ಪ್ರದರ್ಶನ ಮತ್ತು ಮಾರಾಟ ಮಹಾಮೇಳ ಬರುವ ಮಂದಿಯನ್ನು ಆಕರ್ಷಿಸಲಿದೆ. ಅಲ್ಲದೆ ಆಹಾರ ಮೇಳ, ಫಲಪುಷ್ಪ ಮೇಳ, ಕರಕುಶಲ ಮತ್ತು ಪ್ರಾಚ್ಯವಸ್ತು ಪ್ರದರ್ಶನ ಮೇಳ ಗಮನ ಸೆಳೆಯಲಿದೆ.