VIRASAT ROUNDS | ಆಳ್ವಾಸ್ ಅಂಗಳದಲ್ಲಿ ಘಮ್ಮೆನ್ನುತ್ತಿದೆ ಸೇವಂತಿಗೆ, ಜೀನ್ಯ, ಗೌರಿ, ಡಾಲಿ, ಲಿಲ್ಲಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿರಾಸತ್ ಸಂಭ್ರಮದಲ್ಲಿರುವ ಮೂಡುಬಿದಿರೆಯ ಆಳ್ವಾಸ್ ಅಂಗಳದಲ್ಲಿ ಅತಿಥಿಗಳನ್ನು ಭರ್ಜರಿಯಾಗಿ ಸ್ವಾಗತಿಸುತ್ತಿದೆ ಸದಾಪುಷ್ಪ, ಸೇವಂತಿಗೆ, ಜೀನ್ಯ, ಗೌರಿ, ಡಾಲಿ, ಲಿಲ್ಲಿ, ಕೆಪುಳ…

ಈ ಆವರಣದಲ್ಲಿ ಬರೋಬ್ಬರಿ ಎರಡು ಲಕ್ಷಕ್ಕೂ ಅಧಿಕ ಸಸಿಗಳನ್ನು ಬೆಳೆಸಲಾಗಿದೆ. ಇವೆಲ್ಲವುಗಳಿಗೆ ಮಾರ್ಗದರ್ಶನ ಖುದ್ದು ಶಿಕ್ಷಣ ಸಂಸ್ತೇಯ ಅಧ್ಯಕ ಡಾ. ಮೋಹನ ಆಳ್ವರದ್ದು.

ಕೇವಲ ಪುಷ್ಪ ಮಾತ್ರವಲ್ಲ, ಆವರಣದಲ್ಲೇ ಬೆಳೆಸಿದ ತರಕಾರಿಗಳಾದ ಬೆಂಡೆ ಕಾಯಿ, ಸೋರೆಕಾಯಿ, ಟೊಮೆಟೊ, ಬದನೆಕಾಯಿ, ಪಡವಲಕಾಯಿ, ಕುಂಬಳಕಾಯಿ, ಹಾಗಲಕಾಯಿ, ಔಷಧೀಯ ಸಸ್ಯಗಳಾದ ಅಮ್ರ, ನಂದಿ, ಬಕುಲಾ, ಶಲ್ಮಾಲಿ, ಜಂಬೂ, ತಿಲಕ, ತಾರೇಕಾಯಿ, ಸರಳ, ಪ್ರಿಯಂಗು, ಕದಂಬ, ತೆಂದುಕ, ಅಶ್ವತ್ಥ, ಶಿರೀಶ, ಸಪ್ತ ಪರ್ಣಿ, ದೇವದಾರು, ಸಂಪಿಗೆ, ಅಶೋಕ, ಕಪಿತ, ಶಾಲವೃಕ್ಷ, ನಾಗಾಕೇಸರ, ಪಾಲಶ ಗಿಡ ಸೇರಿದಂತೆ ನೂರಾರು ಸಸ್ಯ ಸಂಕುಲವಿದೆ.

ಈ ಬಾರಿಯ ಆಳ್ವಾಸ್ ವಿರಾಸತ್‌ನಲಿ ಇಷ್ಟು ಮಾತ್ರವಲ್ಲ, ಅನ್ವೇಷಣಾತ್ಮಕ ಕೃಷಿಕ ಶತಾಯುಷಿ ಮಿಜಾರುಗುತ್ತು ಆನಂದ ಆಳ್ವ ಸ್ಮರಣಾರ್ಥ ಮುಂಡ್ರುದೆಗುತ್ತು ಕೆ. ಅಮರನಾಥ ಶೆಟ್ಟಿ (ಕೃಷಿಸಿರಿ) ಆವರಣದಲ್ಲಿ ನಡೆಯುವ ೭ ಮೇಳಗಳ ೭೫೦ಕ್ಕೂ ಹೆಚ್ಚಿನ ಮಳಿಗೆಗಳಲ್ಲಿ ಪ್ರದರ್ಶನ ಮತ್ತು ಮಾರಾಟ ಮೇಳವು ವಿಶೇಷ ಆಕರ್ಷಣೆಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!