ಶಬರಿಮಲೆ ಯಾತ್ರಿಕರ ಸಂಖ್ಯೆ ಹೆಚ್ಚಳ: ರೈಲ್ವೆ ಇಲಾಖೆಯಿಂದ ವಂದೇ ಭಾರತ್ ಶಬರಿ ವಿಶೇಷ ರೈಲಿನ ವ್ಯವಸ್ಥೆ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಈ ಭಾರೀ ಪ್ರಮಾಣದಲ್ಲಿ ಭಕ್ತರು ಭೇಟಿ ನೀಡುತ್ತಿದ್ದು, ಭಕ್ತರ ನಿರ್ವಹಣೆಯಲ್ಲಿ ದೇಗುಲ ಆಡಳಿತ ಮಂಡಳಿ ಪೂರ್ಣ ವಿಫಲವಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಮದ್ಯೆ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ಪೂರೈಸಲು ದಕ್ಷಿಣ ರೈಲ್ವೆಯು ಚೆನ್ನೈ ಸೆಂಟ್ರಲ್ ಮತ್ತು ಕೊಟ್ಟಾಯಂ ನಡುವೆ ವಂದೇ ಭಾರತ್ ಶಬರಿ ವಿಶೇಷ ರೈಲನ್ನು ಓಡಿಸಲಿದೆ.

ಈ ಕುರಿತು ಮಾಹಿತಿ ನೀಡಿದ ದಕ್ಷಿಣ ರೈಲ್ವೆ, ರೈಲು ಸಂಖ್ಯೆ 06151 ಎಂಜಿಆರ್ ಚೆನ್ನೈ ಸೆಂಟ್ರಲ್-ಕೊಟ್ಟಾಯಂ ವಂದೇ ಭಾರತ್ ವಿಶೇಷ ರೈಲು ಎಂಜಿಆರ್ ಚೆನ್ನೈ ಸೆಂಟ್ರಲ್‌ನಿಂದ 04.30 ಗಂಟೆಗೆ ಹೊರಟು ಡಿಸೆಂಬರ್ 15, 17, 22 ಮತ್ತು 24 ರಂದು ಅದೇ ದಿನ 16.15 ಗಂಟೆಗೆ ಕೊಟ್ಟಾಯಂ ತಲುಪಲಿದೆ.

ಅದೇ ರೀತಿ ರೈಲು ಸಂಖ್ಯೆ 06152 ಕೊಟ್ಟಾಯಂ-ಡಾ ಎಂಜಿಆರ್ ಚೆನ್ನೈ ಸೆಂಟ್ರಲ್ ಡಿಸೆಂಬರ್ 16, 18, 23 ಮತ್ತು 25 ರಂದು 04.40 ಗಂಟೆಗೆ ಕೇರಳ ಪಟ್ಟಣದಿಂದ ಹೊರಟು ಅದೇ ದಿನ 17.15 ಗಂಟೆಗೆ ಇಲ್ಲಿಗೆ ತಲುಪುತ್ತದೆ. ಈ ರೈಲು ಕಟ್ಪಾಡಿ, ಸೇಲಂ, ಪಾಲಕ್ಕಾಡ್ ಮತ್ತು ಆಲುವಾ ಸೇರಿದಂತೆ ನಿಲ್ದಾಣಗಳಲ್ಲಿ ನಿಗದಿತ ನಿಲುಗಡೆಗಳನ್ನು ಮಾಡುತ್ತದೆ ಎಂದು ಮಾಹಿತಿ ನೀಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!