ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭೆಯಲ್ಲಿ ಭದ್ರತಾ ಉಲ್ಲಂಘನೆ ಮಾಡಿದ ಆರೋಪಿಗಳು ಭಗತ್ ಸಿಂಗ್ ಮಾದರಿಯನ್ನು ಅನುಕರಣೆಗೆ ಯತ್ನಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಘಟನೆಯಲ್ಲಿ ಭಾಗಿಯಾಗಿರುವ ಮನೋರಂಜನ್ ಡಿ ಎಂಬಾತ, ಭಗತ್ ಸಿಂಗ್ ಫ್ಯಾನ್ ಕ್ಲಬ್ ಎಂಬ ಸಾಮಾಜಿಕ ಜಾಲತಾಣ ಪೇಜ್ ನೊಂದಿಗೆ ಗುರುತಿಸಿಕೊಂಡಿದ್ದನು, ಆತ ಕ್ರಾಂತಿಕಾರಿ ಮಾದರಿಯ ಆಲೋಚನೆಗಳನ್ನು ಹೊಂದಿದ್ದ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಆತ ಮೈಸೂರಿನ ಮೂಲದವನಾಗಿದ್ದು, ಮೈಸೂರು ಪೊಲೀಸರು ಕಾರ್ಯಪ್ರವೃತ್ತರಾಗಿ ಆತನ ಹಿನ್ನೆಲೆ ಪರಿಶೀಲನೆ ನಡೆಸಲು ಮುಂದಾದರು. ಈ ವೇಳೆ ಆತ ಭಗತ್ ಸಿಂಗ್ ಫ್ಯಾನ್ ಕ್ಲಬ್ ಜೊತೆ ಗುರುತಿಸಿಕೊಂಡಿರುವುದು ಕಂಡುಬಂಡಿದೆ.ಆದ್ರೆ ನಾವು ಯಾವುದೇ ಕ್ರಿಮಿನಲ್ ಹಿನ್ನೆಲೆಯನ್ನು ಕಂಡಿಲ್ಲ ಎಂದಿದ್ದಾರೆ.
ಮೇಲ್ನೋಟಕ್ಕೆ ಶಾಂತ ವ್ಯಕ್ತಿಯಂತೆ ತೋರುತ್ತದೆ. ಆದರೆ ಆತ ಓದಿದ ಪುಸ್ತಕಗಳನ್ನು ನೋಡಿದಾಗ ‘ಕ್ರಾಂತಿಕಾರಿ ಮನಸ್ಥಿತಿ’ ಇರುವವನು ಎಂಬುದು ಬಹಿರಂಗವಾಗಿದೆ ಎಂದು ಎಸಿಪಿ ತಿಳಿಸಿದ್ದಾರೆ.
ಇಲ್ಲಿ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಭಗತ್ ಸಿಂಗ್ ಮತ್ತು ಗುಂಪು ಮಾಡಿದ್ದನ್ನು ಅವರು ಪುನರಾವರ್ತಿಸಲು ಬಯಸುತ್ತಿರುವಂತೆ ತೋರುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.