ಹೊಸದಿಗಂತ ವರದಿ,ಹುಬ್ಬಳ್ಳಿ:
ಕಾಂಗ್ರೆಸ್ ಬಿಟ್ಟು ನಾನು ಮರಳಿ ಬಿಜೆಪಿಗೆ ಹೋಗುವ ಪ್ರಶ್ನೆಯಿಲ್ಲ. ಕೆ.ಎಸ್. ಈಶ್ವರಪ್ಪ ಅವರು ನನ್ನೊಂದಿಗೆ ಮಾತನಾಡುವ ಅವಶ್ಯಕತೆ ಇಲ್ಲ ಎಂದು ವಿಧಾನ ಪರಿಷತ್ ಸದಸ್ಯ ಜಗದೀಶ ಶೆಟ್ಟರ ಹೇಳಿದರು.
ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ಬಿಟ್ಟು ಹೋಗುವವರನ್ನು ತಡೆಯಲು ಇಂತಹ ಹೇಳಿಕೆ ನೀಡುತ್ತಿದ್ದಾರೆ. ನಾನು ಬಿಜೆಪಿ ಹೋಗಲ್ಲ ಎಂದು ಪದೇ ಪದೇ ಹೇಳಿದರೂ ಈ ರೀತಿ ಹೇಳಿಕೆ ನೀಡುವ ಮೂಲಕ ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದರು.
ಈಶ್ವರಪ್ಪ ಅವರು ಸಣ್ಣ ಎಂಎಲ್‌ಎ ಟಿಕೆಟ್ ಸಲುವಾಗಿ ಪಕ್ಷ ತೊರೆದರು ಅನ್ನುತ್ತಿದ್ದಾರೆ. ಅದನು ಕೊಡಿಸಲು ಆಗಲಿಲ್ಲ ಇವರಿಗೆ. ಸ್ವಾಭಿಮಾನಕ್ಕೆ ಧಕ್ಕೆಯಾಗಿದ್ದರಿಂದ ನಾನು ಆ ಪಕ್ಷ ಬಿಟ್ಟು ಹೊರ ಬಂದೆ. ಈಶ್ವರಪ್ಪ ಅದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.
ತತ್ವ,ಸಿದ್ಧಾಂತ ಹಾಗೂ ಅಜೆಂಟ್ ಬಗ್ಗೆ ಮಾತನಾಡುತ್ತಾರೆ. ಆದರೆ ಅದನ್ನು ನಂಬಿದ್ದ ವ್ಯಕ್ತಿಯನ್ನು ಕಡೆಗಣಿಸಿದರು. ೪೦ ಪ್ರಕರಣ ಇದ್ದವರಿಗೆ ಟಿಕೆಟ್ ನೀಡಿದರು. ಬೇರೆ ಪಕ್ಷದಿಂದ ಬಂದವರಿಗೆ ಮನೆ ಹಾಕಿದರು. ಆದರೆ ಪಕ್ಷ ಕಟ್ಟಿ ಬೆಳೆಸಿದವರಿಗೆ ಟಿಕೆಟ್ ನೀಡದೆ ಕಡೆಗಣಿಸಿದರು. ಈಗ ಬಿಜೆಪಿ ಮೊದಲಿನಂತೆ ಇಲ್ಲ. ಭ್ರಷ್ಟಾಚಾರ ರಹಿತ ಹಾಗೂ ಎಂ.ಕೆ. ಅಡ್ವಾನಿ, ಅಟಲ್‌ಬೀಹಾರಿ ವಾಜಪೇ ಅವರಿದ್ದ ಬಿಜೆಪಿ ಈಗಿಲ್ಲ ಎಂದು ಹರಿಹಾಯ್ದರು.
ಬೆಳಗಾವಿಯಲ್ಲಿ ನಡೆಯುತ್ತಿರವ ಅವೇಶನದಲ್ಲಿ ಉತ್ತರ ಕರ್ನಾಟಕದ ಬಗ್ಗೆ ಪರಿಣಾಮ ಕಾರಿ ಚರ್ಚೆ ನಡೆಯಬೇಕಿತ್ತು. ಅದು ಆಗದಿರುವುದು ಬೇಸರವಿದೆ. ಆದ್ದರಿಂದ ಈ ಭಾಗದಿಂದ ಆಯ್ಕೆಯಾದ ಜನಪ್ರತಿನಿಗಳು ಅವಕಾಶ ಸಿಕ್ಕಾಗ ಹಲವ ಯೋಜನೆಗಳನ್ನು ತಂದು ಅಭಿವೃದ್ಧಿ ಮಾಡಬೇಕು ಎಂದು ಸಲಹೆ ನೀಡಿದರು.
ಲೋಕಸಭೆ ಕಲಾಪದಲ್ಲಿ ಯುವಕರು ನುಗ್ಗಿದ್ದು, ಖಂಡನೀಯ. ಭದ್ರತಾ ಲೋಪದಿಂದ ಹೀಗಾಗಿದೆ. ಈ ಬಗ್ಗೆ ಸಮಗ್ರ ತನಿಖೆ ಆಗಬೇಕು. ತಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಅಷ್ಟೊಂದು ಹಣ ಖರ್ಚು ಮಾಡಿ ಸಂಸತ್ತ ಭವನ ನಿರ್ಮಿಸಿದ್ದಾರೆ. ಭದ್ರತೆ ಸರಿಯಿಲ್ಲ ಎಂಬುವುದು ಸರ್ಕಾರಕ್ಕೆ ಕೆಟ್ಟ ಹೆಸರು ಎಂದು ಹೇಳಿದರು.