ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳದಲ್ಲಿ (Kerala) ಮತ್ತೆ ಕೊರೋನಾ ಆತಂಕ ಹೆಚ್ಚಿಸಿದ್ದು, ಒಂದು ತಿಂಗಳಲ್ಲಿ ವರದಿಯಾದ ದೈನಂದಿನ ಪ್ರಕರಣಗಳ ಸಂಖ್ಯೆ 12 ರಿಂದ 150 ಕ್ಕೆ ಏರಿಕೆಯಾಗಿದೆ.ಜೊತೆಗೆ 10 ದಿನಗಳಲ್ಲಿ ಮೂರು ಸಾವುಗಳು ವರದಿಯಾಗಿವೆ.
ಕೇರಳದಲ್ಲಿ ಬುಧವಾರ 230 ಹೊಸ ಕೋವಿಡ್ (Covid 19) ಪ್ರಕರಣಗಳು ವರದಿಯಾಗಿವೆ. ಇದರಿಂದ ಸೋಂಕಿತರ ಸಂಖ್ಯೆ 949ಕ್ಕೆ ಏರಿಕೆಯಾಗಿದ್ದು,ರಾಜ್ಯ ಸರ್ಕಾರ ಗಂಭೀರ ಎಚ್ಛೆತ್ತುಗೊಂಡಿದೆ.
ಶಬರಿಮಲೆಯಲ್ಲಿ 80,000 ಕ್ಕೂ ಹೆಚ್ಚು ಭಕ್ತರಿಂದ ತುಂಬಿರುವ ಕಾರಣ ಕೋವಿಡ್ ಹೆಚ್ಚಾಗುವ ಆತಂಕ ಶುರುವಾಗಿದ್ದು, ಇದರ ನಡುವೆ ಎರಡೂ ಅಡೆತಡೆಗಳನ್ನು ನಿಯಂತ್ರಿಸಲು ಕೇರಳ ಸರ್ಕಾರ ಗರಿಷ್ಠ ಪ್ರಯತ್ನಗಳನ್ನು ಮಾಡುತ್ತಿದೆ.
ರಾಜ್ಯದಲ್ಲಿ ನವೆಂಬರ್‌ನಲ್ಲಿ 479 ಪ್ರಕರಣಗಳಿದ್ದರೆ, ಈ ತಿಂಗಳ ಮೊದಲ ಎಂಟು ದಿನಗಳಲ್ಲಿ 825 ಹೊಸ ಪ್ರಕರಣಗಳು ವರದಿಯಾಗಿವೆ. ನವೆಂಬರ್‌ನಲ್ಲಿ ಒಬ್ಬ ರೋಗಿಯು ಸಾವಿಗೀಡಾಗಿದ್ದು , ಈ ತಿಂಗಳು ಇಬ್ಬರು ಸಾವಿಗೀಡಾಗಿದ್ದಾರೆ.