ಭಾರತ ಸಹಿತ 33 ದೇಶಗಳಿಗೆ ವೀಸಾ ರದ್ದುಗೊಳಿಸಿ ಇರಾನ್ ಕ್ಯಾಬಿನೆಟ್ ಘೋಷಣೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇರಾನ್ ಕ್ಯಾಬಿನೆಟ್ ಭಾರತೀಯರಿಗೆ ವೀಸಾ ಅವಶ್ಯಕತೆಗಳನ್ನು ಏಕಪಕ್ಷೀಯವಾಗಿ ರದ್ದುಗೊಳಿಸಲು ನಿರ್ಧರಿಸಿದೆ.
ಈ ಸಂಬಂಧ ಇರಾನ್‌ನ ಸಾಂಸ್ಕೃತಿಕ ಪರಂಪರೆ, ಪ್ರವಾಸೋದ್ಯಮ ಮತ್ತು ಕರಕುಶಲ ಸಚಿವ ಎಜ್ಜತೊಲ್ಲಾಹ್ ಜರ್ಘಮಿ ಮಾಹಿತಿ ನೀಡಿದ್ದು,ಭಾರತ ಮಾತ್ರವಲ್ಲದೆ 33 ದೇಶಗಳಿಗೆ ವೀಸಾ ಅವಶ್ಯಕತೆಗಳನ್ನು ಮನ್ನಾ ಮಾಡಲು ಇರಾನ್ ಬುಧವಾರ ನಿರ್ಧರಿಸಿದೆ.

ಕ್ಯಾಬಿನೆಟ್ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜರ್ಗಾಮಿ, ಪ್ರವಾಸೋದ್ಯಮ ಆಗಮನವನ್ನು ಹೆಚ್ಚಿಸುವ ಮತ್ತು ವಿಶ್ವಾದ್ಯಂತ ದೇಶಗಳಿಂದ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು. ಪ್ರವಾಸೋದ್ಯಮವನ್ನು ಉತ್ತೇಜಿಸುವ ಪ್ರಯತ್ನಗಳು ಇರಾನೋಫೋಬಿಯಾ ಅಭಿಯಾನಗಳನ್ನು ತಟಸ್ಥಗೊಳಿಸಬಹುದು ಎಂದೂ ಹೇಳಿದರು.

ಭಾರತ ಮಾತ್ರವಲ್ಲದೆ, ರಷ್ಯಾ, ಯುನೈಟೆಡ್ ಅರಬ್ ಎಮಿರೇಟ್ಸ್, ಬಹ್ರೇನ್, ಸೌದಿ ಅರೇಬಿಯಾ, ಕತಾರ್, ಕುವೈತ್, ಲೆಬನಾನ್, ಉಜ್ಬೇಕಿಸ್ತಾನ್, ಕಿರ್ಗಿಸ್ತಾನ್, ತಜಕಿಸ್ತಾನ್, ಟುನೀಶಿಯಾ, ಮಾರಿಟಾನಿಯಾ, ತಾಂಜಾನಿಯಾ, ಜಿಂಬಾಬ್ವೆ, ಮಾರಿಷಸ್, ಸೀಶೆಲ್ಸ್, ಇಂಡೋನೇಷಿಯಾ, ದರುಸ್ಸಲಾಮ್, ಜಪಾನ್, ಸಿಂಗಾಪುರ, ಕಾಂಬೋಡಿಯಾ, ಮಲೇಷ್ಯಾ , ಬ್ರೆಜಿಲ್, ಪೆರು, ಕ್ಯೂಬಾ, ಮೆಕ್ಸಿಕೋ, ವೆನೆಜುವೆಲಾ, ಬೋಸ್ನಿಯಾ ಮತ್ತು ಹರ್ಜೆಗೋವಿನಾ, ಸೆರ್ಬಿಯಾ, ಕ್ರೊಯೇಷಿಯಾ ಮತ್ತು ಬೆಲಾರಸ್ – ಒಟ್ಟಾರೆ 33 ದೇಶಗಳ ಪ್ರವಾಸಿಗರಿಗೆ ಇರಾನ್‌ಗೆ ಹೋಗಲು ಇನ್ಮಂದೆ ವೀಸಾ ಬೇಕಿಲ್ಲ.

ಕಳೆದ ಬಾರಿ ಟರ್ಕಿ, ರಿಪಬ್ಲಿಕ್ ಆಫ್ ಅಜರ್‌ಬೈಜಾನ್, ಓಮನ್, ಚೀನಾ, ಅರ್ಮೇನಿಯಾ, ಲೆಬನಾನ್ ಮತ್ತು ಸಿರಿಯಾ ಪ್ರವಾಸಿಗರಿಗೆ ಇರಾನ್‌ ವೀಸಾ ಮನ್ನಾ ಮಾಡಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!