ಹೊಸದಿಗಂತ, ವರದಿ,ಶಿವಮೊಗ್ಗ:
ತೀರ್ಥಹಳ್ಳಿ ತಾಲೂಕಿನಲ್ಲಿ ಮತ್ತೆ ಮಂಗನ ಕಾಯಿಲೆ (ಕೆಎಫ್ ಡಿ) ಪ್ರಕರಣ ಪತ್ತೆಯಾಗಿದೆ. ಇದು ಈ ವರ್ಷ ಪತ್ತೆ ಆಗಿರುವ ಮೊದಲ ಮಂಗನ ಕಾಯಿಲೆ ಪ್ರಕರಣವಾಗಿದೆ.
ತಾಲೂಕಿನ ಶೇಡ್ಗಾರ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅತ್ತಿಸರ ಗ್ರಾಮದ 53 ವರ್ಷದ ಮಹಿಳೆಯೊಬ್ಬರ ಆರ್.ಟಿ.ಸಿ.ಪಿ.ಆರ್. ಟೆಸ್ಟ್ ಪಾಸಿಟಿವ್ ಬಂದಿದೆ ಎಂದು ತಿಳಿದುಬಂದಿದೆ.
ಪಾಸಿಟಿವ್ ಬಂದ ಮಹಿಳೆಯ ಆರೋಗ್ಯ ಸ್ಥಿರವಾಗಿದ್ದು, ಅವರನ್ನು ತೀರ್ಥಹಳ್ಳಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಅತ್ತಿಸರ ತಾಲೂಕಿನ ಕಾಡಂಚಿನ ಗ್ರಾಮವಾಗಿದ್ದು ಈ ಹಿಂದೆಯು ಈ ಭಾಗದಲ್ಲಿ ಕೆಎಫ್ಡಿ ಪ್ರಕರಣಗಳು ಕಂಡುಬಂದಿದ್ದವು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.