ಮೋದಿ-ಯೋಗಿ ಇರುವವರೆಗೆ ಮಾತ್ರ ರಾಮ ಮಂದಿರ… ಬಳಿಕ ಒಡೆದು ಹಾಕುತ್ತೇವೆ: ಮುಸ್ಲಿಂ ವ್ಯಕ್ತಿಯಿಂದ ವಿವಾದಿತ ಹೇಳಿಕೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಯೋಧ್ಯೆ ರಾಮ ಮಂದಿರ ದಲ್ಲಿ ನಿರ್ಮಾಣ ಕೆಲಸ ಭರದಿಂದ ಸಾಗುತ್ತಿದ್ದು, ಜನವರಿ 22 ರಂದು ಪ್ರಧಾನಿ ನರೇಂದ್ರ ಮೋದಿ ಮಂದಿರ ಲೋಕಾರ್ಪಣೆಗೊಳಿಸಲಿದ್ದಾರೆ.

ಇದರ ನಡುವೆ ಮುಸ್ಲಿಂ ವ್ಯಕ್ತಿಯೊಬ್ಬರು ಆಡಿದ ಮಾತಿಗೆ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.

ಮೋದಿ, ಸಿಎಂ ಯೋಗಿ ಆದಿತ್ಯನಾಥ್ ಆಡಳಿತದಲ್ಲಿ ಇರುವವರೆಗೆ ಮಾತ್ರ ರಾಮ ಮಂದಿರ ಇರಲಿದೆ. ಮೋದಿ-ಯೋಗಿ ಬಳಿಕ ನಾವು ರಾಮ ಮಂದಿರ ಒಡೆದು ಹಾಕಿ ದೂರ ಎಸೆಯುತ್ತೇವೆ. ಬಳಿಕ ಬಾಬ್ರಿ ಮಸೀದಿ ಮತ್ತೆ ನಿರ್ಮಾಣ ಮಾಡುತ್ತೇವೆ ಎಂದಿದ್ದಾರೆ. ಈ ಹೇಳಿಕೆ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.

ನೀವು(ಹಿಂದುಗಳು) ರಾಮ ಮಂದಿರ ನಿರ್ಮಾಣ ಮಾಡಿ ಪೂಜೆ ಮಾಡುತ್ತಾ ಇರಿ. ಎಲ್ಲೀವರೆಗೆ? ಮೋದಿ-ಯೋಗಿ ಇರುವ ತನಕ ನೀವು ರಾಮ ಮಂದಿರದಲ್ಲಿ ಪೂಜೆ ಮಾಡುತ್ತೀರಿ. ಅವರ ಬಳಿಕ ನಾವು ರಾಮ ಮಂದಿರ ಕೆಡವುತ್ತೇವೆ. ರಾಮ ಮಂದಿರವನ್ನೂ ದೂರಕ್ಕೆ ಎಸೆದು, ಕೆಡವಿದ ಬಾಬ್ರಿ ಮಸೀದಿಯನ್ನು ಮತ್ತೆ ನಿರ್ಮಿಸುತ್ತೇವೆ. ರಾಮ ಮಂದಿರ ನಿರ್ಮಾಣ ಮಾಡಲು ಎಷ್ಟೋ ಜಾಗವಿತ್ತು. ಬಾಬ್ರಿ ಮಸೀದಿ ಜಾಗದಲ್ಲೇ ಯಾಕೆ ಮಾಡಿದ್ದೀರಿ. ಬಾಬ್ರಿ ಮಸೀದಿ ನಿರ್ಮಾಣ ಮಾಡೇ ಮಾಡುತ್ತೇವೆ ಎಂದು ಮುಸ್ಲಿಂ ವ್ಯಕ್ತಿ ಹೇಳಿದ್ದಾರೆ.

ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಪರ ವಿರೋಧಗಳು ವ್ಯಕ್ತವಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!