ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ ಐಎ) ಭಯೋತ್ಪಾದಕರ ಪಟ್ಟಿಯಲ್ಲಿ ಬಿಡುಗಡೆ ಮಾಡಿದ್ದು , ಆಉಗ್ರರ ಬಗ್ಗೆ ಮಾಹಿತಿ ಇದ್ದವರು ಎನ್‍ಐಎ ಅಧಿಕಾರಿಗಳನ್ನು ಸಂಪರ್ಕಿಸಬೇಕು ಎಂದು ತನಿಖಾ ಸಂಸ್ಥೆ ತಿಳಿಸಿದೆ.
ಕೇರಳದ ಪಾಪ್ಯುಲರ್ ಫ್ರಂಟ್ ಉಗ್ರರ ಪತ್ತೆಗಾಗಿ ಲುಕ್ ಔಟ್ ನೋಟಿಸ್ ಜಾರಿ ಮಾಡಿದೆ.ವಿವಿಧ ಸಮುದಾಯಗಳ ಜನರ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದವರು ಮತ್ತು ಪಾಲಕ್ಕಾಡ್ ಶ್ರೀನಿವಾಸನ್ ಹತ್ಯೆಯಲ್ಲಿ ಭಾಗಿಯಾಗಿರುವವರು ಸೇರಿಕೊಂಡಿದ್ದಾರೆ.
ಎನ್‍ಐಎಗೆ ಬೇಕಾಗಿರುವ ಭಯೋತ್ಪಾದಕರು ಪಾಲಕ್ಕಾಡ್‍ನ ಪಟ್ಟಾಂಬಿಯಿಂದ ಮುಹಮ್ಮದ್ ಮನ್ಸೂರ್, ಪಾಲಕ್ಕಾಡ್ ಕೂಟ್ನಾಡ್‍ನ ಶಾಹುಲ್ ಹಮೀದ್, ಪಾಲಕ್ಕಾಡ್‍ನ ಒಟ್ಟಪಾಲಂನಿಂದ ಮುಹಮ್ಮದಲಿ, ಎರ್ನಾಕುಳಂನ ಅಲಂಗಾಡ್ ನ ಮುಹಮ್ಮದ್ ಯಾಸಿರ್, ಮಲಪ್ಪುರಂನ ಕೊಳತ್ತೂರ್ ನ ಶಫೀಕ್ ಪಿ ಮತ್ತು ಎರ್ನಾಕುಳಂ ಕುನ್ನತ್ತುನಾಡ್ ನ ರಫೀಕ್ ಎಂಎಸ್ ಎಂಬವರಿದ್ದಾರೆ. ಆರೋಪಿಗಳ ಚಿತ್ರಗಳು ಮತ್ತು ಮಾಹಿತಿಯನ್ನು ಎನ್‍ಐಎ ಬಿಡುಗಡೆ ಮಾಡಿದೆ.
ಪಟ್ಟಿಯಲ್ಲಿ ಸೇರ್ಪಡೆಗೊಂಡಿರುವ ಉಗ್ರರ ಬಗ್ಗೆ ಮಾಹಿತಿ ಇದ್ದವರು ಎನ್‍ಐಎ ಅಧಿಕಾರಿಗಳನ್ನು ಸಂಪರ್ಕಿಸಬೇಕು ಎಂದು ತನಿಖಾ ಸಂಸ್ಥೆ ತಿಳಿಸಿದೆ. ಆರೋಪಿಗಳ ಬಗ್ಗೆ ಮಾಹಿತಿ ಇರುವವರು +91-9497715294 ಗೆ ಕರೆ ಮಾಡಿ ತಿಳಿಸಲು ಸೂಚಿಸಿದ್ದು, ಹೆಸರನ್ನು ಗೌಪ್ಯವಾಗಿ ಇಡಲಾಗುವುದು ಎಂದು ಹೇಳಿದೆ.