ಸಚಿವ ಕೆಜೆ ಜಾರ್ಜ್‌ ವಿರುದ್ಧ ಪೋಸ್ಟ್: ತೆಲಂಗಾಣ ಮಾಜಿ ಪಾಲಿಕೆ ಸದಸ್ಯನ ಪುತ್ರನ ಬಂಧನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯ ಇಂಧನ ಖಾತೆಯ ಸಚಿವ ಕೆಜೆ ಜಾರ್ಜ್‌ (KJ George) ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ (Social Media) ಪೋಸ್ಟ್‌ ಮಾಡಿದ್ದ ತೆಲಂಗಾಣ ಮಾಜಿ ಪಾಲಿಕೆ ಸದಸ್ಯನ ಪುತ್ರನನ್ನು ಬೆಂಗಳೂರಿನ ಸೈಬರ್‌ ಕ್ರೈಂ ಪೊಲೀಸರು (Cyber Crime Police) ಬಂಧಿಸಿದ್ದಾರೆ.

ತೆಲಂಗಾಣದ ಕರೀಂನಗರ ನಿವಾಸಿ ರವಿಕಾಂತ ಶರ್ಮಾ (33) ಬಂಧಿತ ಆರೋಪಿ.

ತೆಲಂಗಾಣ ಚುನಾವಣೆ (Telangana Vidhan Sabha Election) ವೇಳೆ ಕರ್ನಾಟಕದ ವಿದ್ಯುತ್ ಪರಿಸ್ಥಿತಿ ಮತ್ತು ಗೃಹಜ್ಯೋತಿ (Gruha Jyothi) ಯೋಜನೆ ಬಗ್ಗೆ ಭಾರತ ರಾಷ್ಟ್ರ ಸಮಿತಿಯ ಐಟಿ ಸೆಲ್‌ ಸದಸ್ಯ ರವಿಕಾಂತ ಶರ್ಮಾ ಪೋಸ್ಟ್‌ ಮಾಡಿದ್ದನು.

ಗೃಹ ಜ್ಯೋತಿ ಯೋಜನೆಯ ಬಗ್ಗೆ ನಕಲಿ ಆಡಿಯೋ ಕ್ಲಿಪ್‌ ಶೇರ್ ಮಾಡಿದ್ದಕ್ಕೆ ಬೆಸ್ಕಾಂ ಜನರಲ್‌ ಮ್ಯಾನೇಜರ್‌ ಅವರು ಪೂರ್ವ ವಿಭಾಗದ ಸೈಬರ್ ಕ್ರೈಂ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!