ಹಾವೇರಿ: 4.65 ಲಕ್ಷ ಮೌಲ್ಯದ 12 ಬೈಕ್ ವಶ: ಇಬ್ಬರು ಬೈಕ್ ಕಳ್ಳರ ಬಂಧನ

ಹಾವೇರಿ: ಹೆಲ್ಮೆಟ್ ಇಲ್ಲದೇ ಚಾಲನೆ ಮಾಡುತ್ತಿದ್ದವರ ತಪಾಸಣೆ ವೇಳೆ ಸಂಶಯಾತ್ಮಕವಾಗಿ ವರ್ತಿಸಿದ ವ್ಯಕ್ತಿಯನ್ನು ಸುಧೀರ್ಘ ವಿಚಾರಣೆಗೆ ಒಳಪಡಿಸಿದಾಗ ಆತ ಹಾಗೂ ಇನ್ನೋರ್ವ ಸೇರಿ ಬರೋಬ್ಬರಿ 12ಬೈಕ್‌ಗಳನ್ನು ಕಳ್ಳತನ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ಹಾವೇರಿ ಶಹರ ಪೊಲೀಸ್ ಠಾಣೆಯ ಸಿಪಿಐ ಮೋತಿಲಾಲ್ ಪವಾರ ಮಾಹಿತಿ ನೀಡಿದರು.

ನಗರದ ಶಹರ ಪೊಲೀಸ್ ಠಾಣೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ನೂತನ ಎಸ್ಪಿಯಾಗಿ ಬಂದ ಅಂಶುಕುಮಾರ ಅವರ ನಿರ್ದೇಶನದಂತೆ ಕಳೆದೊಂದು ತಿಂಗಳಿಂದ ಸಂಚಾರ ನಿಯಮ ಉಲ್ಲಂಘನೆಯನ್ನು ಜಿಲ್ಲೆಯಾದ್ಯಂತ ಪೊಲೀಸ್ ಇಲಾಖೆ ಕಟ್ಟು ನಿಟ್ಟಾಗಿ ತಪಾಸಣೆ ಮಾಡಲಾಗುತ್ತಿದೆ.
ಈ ವೇಳೆ ಹೆಲ್ಮೆಟ್ ರಹಿತ ಚಾಲನೆ ವೇಳೆ ತಪಾಸಣೆಯಲ್ಲಿ ನಗರದ ಒಂದೆಡೆ ಸಂಶಯಾತ್ಮಕ ವ್ಯಕ್ತಿಯ ಹಿನ್ನೆಲೆ ಜಾಲಾಡಿದ ಪೊಲೀಸರಿಗೆ ಬೈಕ್ ಕಳ್ಳತನದ ಜಾಲ ಪತ್ತೆಯಾಗಿತ್ತು. ಹೊಸರಿತ್ತಿಯ ಸಚಿನ್ ತಂದೆ ವಿಜಯ ಸಂಕ್ಲಿಪುರ ಹಾಗೂ ಉಡಚಪ್ಪ ತಂದೆ ಶೇಖಪ್ಪ ದೀಪಾಳಿ ಬಂಧಿತರು. ಇವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದ್ದು, ಇವರಿಂದ ಹಿರೋ ಕಂನಿಯ ೧೨ಬೈಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಬೈಕ್‌ಗಳ ಅಂದಾಜು ಮೌಲ್ಯ ೪.೬೫ಲಕ್ಷ ಎಂದು ಅಂದಾಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ಕಾರವಾರ ಜಿಲ್ಲೆ ಬಾಡ ಚಂಪಲ್ಕೇರ ಗ್ರಾಮದ ಬಂಗಾರಪ್ಪ ಪುಟ್ಟಪ್ಪ ಬಡ್ನಿ ಅವರು  ಬೈಕ್‌ನಲ್ಲಿ ಡಿ.೫ರಂದು ಹಾವೇರಿಗೆ ಬಂದಿದ್ದು ಹಾವೇರಿ ಬಸ್ ನಿಲ್ದಾಣದ ಬ್ರಾಹ್ಮಿ ಹೋಟೆಲ್‌ಗೆ ಬಂದಿದ್ದ ವೇಳೆ ಅವರ ಬೈಕ್ ಕಳ್ಳತನವಾಗಿತ್ತು. ಈ ಕುರಿತು ಅವರು ನಗರ ಠಾಣೆಗೆ ದೂರು ನೀಡಿದ್ದರು. ಈ ಕೃತ್ಯದ ಬೆಂಬತ್ತಿದ ಪೊಲೀಸರಿಗೆ ಕೆಲವು ಮಾಹಿತಿ ಆಧಾರದ ಮೇಲೆ ಹಾಗೂ ಕೆಲ ದೃಶ್ಯಾವಳಿ ಆಧರಿಸಿ ಪ್ರಕರಣದ ಬೆನ್ನತ್ತಿ ಪತ್ತೆ ಬೈಕ್ ಕಳ್ಳತನದ ಜಾಲ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿಸಿದರು.
ಎಸ್ಪಿ, ಎಸ್ಪಿ, ಡಿವೈಎಸ್ಪಿ ಮಾರ್ಗದರ್ಶನದಲ್ಲಿ ನಗರ ಠಾಣೆಯ ಪಿಎಸ್‌ಐ ಪಿ.ಡಿ. ಆರೇರ, ಬಿ.ಎನ್.ಕೂಡಲ, ಸಿಬ್ಬಂದಿಗಳಾದ ಎಂ.ಜಿ. ಯರೇಶಿಮಿ, ಎಸ್.ಜಿ. ವಡ್ನಿಕೊಪ್ಪ, ಮುತ್ತಪ್ಪ ಲಮಾಣಿ, ಎಂ.ಎಸ್. ಮೆಣಸಕ್ಕನವರ, ಚನ್ನಬಸಪ್ಪ, ಲಿಂಗರಾಜ, ಶ್ರೀಕಾಂತ ಪೂಜಾರ, ಚಂದ್ರಕಾಂತ, ಮಾಲತೇಶ ಕಬ್ಬೂರ ಮತ್ತಿತರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!