ಆಫ್ರಿಕಾ ಪ್ರವಾಸ: ಟೆಸ್ಟ್​ ನಿಂದ ಶಮಿ, ಏಕದಿನದಿಂದ ಚಾಹರ್ ಔಟ್​​!

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಶ್ವಕಪ್​ನಲ್ಲಿ ಮಿಂಚಿದ ಟೀಮ್ ಇಂಡಿಯಾ ವೇಗಿ ಮೊಹಮದ್​ ಶಮಿ ಮೊಣಕಾಲು ಗಾಯದಿಂದ ಇನ್ನೂ ಚೇತರಿಸಿಕೊಳ್ಳದ ಕಾರಣ ದಕ್ಷಿಣ ಆಫ್ರಿಕಾ ಪ್ರವಾಸದ 2 ಪಂದ್ಯಗಳ ಟೆಸ್ಟ್​ ಸರಣಿಗೆ ಅಲಭ್ಯರಾಗಿದ್ದಾರೆ.

ವೈದ್ಯಕೀಯ ಸಿಬ್ಬಂದಿಯಿಂದ ಇನ್ನೂ ಫಿಟ್​ನೆಸ್​ ಪ್ರಮಾಣ ಪತ್ರ ಪಡೆಯದ ಹಿನ್ನೆಲೆಯಲ್ಲಿ ಶಮಿ ಹೆಸರನ್ನು ಕೈಬಿಟ್ಟಿರುವುದಾಗಿ ಬಿಸಿಸಿಐ ಶನಿವಾರ (ಡಿ.16) ತಿಳಿಸಿದೆ.

ಡಿ. 26ರಿಂದ ಮೊದಲ ಟೆಸ್ಟ್​ ಪಂದ್ಯ ಆರಂಭವಾಗಲಿದ್ದು, ಶಮಿ ಸ್ಥಾನವನ್ನು ಯಾರು ತುಂಬಲಿದ್ದಾರೆ ಎಂದು ಬಿಸಿಸಿಐ ತಿಳಿಸಿಲ್ಲ. ಸದ್ಯ ಶಮಿಗೆ ಮನೆಯಲ್ಲೇ ಚಿಕಿತ್ಸೆ ಮುಂದುವರಿಯಲಿದ್ದು, ಮುಂದಿನ ವರ್ಷ ಜನವರಿ 25ರಿಂದ ಪ್ರವಾಸಿ ಇಂಗ್ಲೆಂಡ್​ ವಿರುದ್ಧ ನಡೆಯಲಿರುವ 5 ಪಂದ್ಯಗಳ ಟೆಸ್ಟ್​ ಸರಣಿಗೆ ಶಮಿ ಲಭ್ಯವಾಗುವ ನಿರೀಕ್ಷೆ ಇದೆ.

ಏಕದಿನ ತಂಡದಿಂದ ಚಾಹರ್ ಔಟ್​​
ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿಗೆ ದೀಪಕ್​ ಚಹರ್ ಅಲಭ್ಯರಾಗಲಿದ್ದಾರೆ. ಕುಟುಂಬದ ವೈದ್ಯಕೀಯ ತುರ್ತು ಪರಿಸ್ಥಿತಿ ಹಿನ್ನೆಲೆಯಲ್ಲಿ ಆಫ್ರಿಕಾ ಪ್ರವಾಸ ಸಾಧ್ಯವಿಲ್ಲ ಎಂದು ಚಹರ್​ ಹೇಳಿರುವುದಾಗಿ ಬಿಸಿಸಿಐ ತಿಳಿಸಿದೆ.​
ವೇಗಿ ಚಹರ್​ ಬದಲಿಗೆ ಆಕಾಶ್​ ದೀಪ್​ಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ. ಮುಂದಿನ ಭಾನುವಾರದಿಂದ ಜೋಹಾನ್ಸ್​ಬರ್ಗ್​ನಲ್ಲಿ ಮೊದಲ ಪಂದ್ಯದ ಆರಂಭವಾಗಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!