ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭೆಯಲ್ಲಿ ಭದ್ರತಾ ಲೋಪ (Parliament Security Breach) ಪ್ರಕರಣದಲ್ಲಿ ಬಂಧಿತನಾಗಿರುವ ಮಾಸ್ಟರ್‌ಮೈಂಡ್ ಲಲಿತ್ ಝಾ (Lalit Jha) ಈ ಹಿಂದೆ ಫೇಸ್ಬುಕ್‌ನಲ್ಲಿ ʻಭಾರತಕ್ಕೆ ಬೇಕಾಗಿರುವುದು ಬಾಂಬ್ʼ ಎಂದು ಬಂಗಾಳಿ ಭಾಷೆಯಲ್ಲಿ ಬರೆದುಕೊಂಡಿದ್ದ ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ.
ಆರೋಪಿ ಲಲಿತ್ ಝಾನನ್ನ ತನಿಖೆಗೆ ಒಳಪಡಿಸಿರುವ ಪೊಲೀಸರು (Delhi Police) ಆತನ ಸೋಶಿಯಲ್ ಮೀಡಿಯಾ ಹಿನ್ನೆಲೆಯನ್ನು ಪರಿಶೀಲಿಸಲು ಪ್ರತ್ಯೇಕ ತಂಡವನ್ನೂ ರಚಿಸಿದ್ದಾರೆ.ಈ ವೇಳೆ ತನಿಖೆಯಲ್ಲಿ ವ್ಯವಸ್ಥೆಯ ವಿರುದ್ಧ ಝಾ ಅಸಮಾಧಾನ ವ್ಯಕ್ತಪಡಿಸಿದ ಪೋಸ್ಟ್‌ಗಳುಬೆಳಕಿಗೆ ಬಂದಿದೆ.
ದಬ್ಬಾಳಿಕೆ, ಅನ್ಯಾಯ ಮತ್ತು ಅರಾಜಕತೆಯ ವಿರುದ್ಧ ಪ್ರಬಲ ಧ್ವನಿ ಎತ್ತಲು ʻಭಾರತಕ್ಕೆ ಇಂದು ಬಾಂಬ್ ಅಗತ್ಯವಿದೆʼ ಎಂದು ಬಂಗಾಳಿ ಭಾಷೆಯಲ್ಲಿ ಬರೆದುಕೊಂಡಿದ್ದಾನೆ. ಇಂತಹದ್ದೇ ಹಲವು ಪೊಸ್ಟ್‌ಗಳು ಕಂಡುಬಂದಿವೆ. ಈ ಪೋಸ್ಟ್‌ಗಳನ್ನು ಬರೆಯುವ ಉದ್ದೇಶ ಏನಿರಬಹುದು ಎಂಬ ಮಾಹಿತಿಯನ್ನೂ ಪಡೆಯಲಾಗುತ್ತಿದೆ.
ನವೆಂಬರ್ 5ರ ಪೊಸ್ಟ್‌ನಲ್ಲಿ, ತಮ್ಮ ಹಿನ್ನೆಲೆಯನ್ನು ಲೆಕ್ಕಿಸದೆ ತಮ್ಮ ಹಕ್ಕುಗಳಿಗಾಗಿ ಮಾತನಾಡುವ ಜನರನ್ನು ಅನಿವಾರ್ಯವಾಗಿ ಕಮ್ಯುನಿಸ್ಟ್ ಎಂದು ಘೋಷಿಸಲ್ಪಡುತ್ತಾರೆ ಎಂದು ಬರೆದುಕೊಂಡಿದ್ದಾರೆ.