ಹೊಸದಿಗಂತ ವರದಿ, ಧಾರವಾಡ:
ನಗರದ ಅಂಬೈರ ಗಾರ್ಡನ್ ಲಾನದಲ್ಲಿ ಶನಿವಾರ ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಅವರ ಅಭಿನಂದನ ಸಮಾರಂಭ ಜರುಗಿತು.
ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಲ್ಲದಚ್ಚ ಕೃತಿ ಹಾಗೂ ದೊಡ್ಡಹೊಳೆ ದಾಟಿದವರು ಕೃತಿ ಬಿಡುಗಡೆ ಮಾಡಿ, ಚಂದ್ರಕಾಂತ ಬೆಲ್ಲದ ಅವರ ರಾಜಕೀಯ ಹಾಗೂ ಸಮಾಜಿಕ ಕಾರ್ಯಗಳನ್ನು ಗುಣಗಾನ ಮಾಡಿದರು.
ಗದಗ ತೋಂಟದ ಡಾ.ಸಿದ್ಧಲಿಂಗ ಶ್ರೀ, ಧಾರವಾಡ ಮುರುಘಾಮಠದ ಡಾ.ಮಲ್ಲಿಕಾರ್ಜುನ ಶ್ರೀ, ಬಾಲ್ಕಿ ಹಿರೇಮಠದ ಬಸವರಾಜ ಪಟ್ಟದೇವರು ಸಾನ್ನಿಧ್ಯ ವಹಿಸಿದ್ದರು.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಉಸ್ತುವಾರಿ ಸಚಿವ ಸಂತೋಷ ಲಾಡ್, ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಪ್ರಸಾದ ಅಬ್ಬಯ್ಯ, ಶ್ರೀನಿವಾಸ ಮಾನೆ, ಎಸ್.ವಿ.ಸಂಕನೂರ ಇದ್ದರು.