ಅರಬ್ಬಿ ಸಮುದ್ರದಲ್ಲಿ ಹಡಗು ಹೈಜಾಕ್ : ಭಾರತೀಯ ಯುದ್ಧನೌಕೆಯಿಂದ ರಕ್ಷಣೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅರಬ್ಬಿ ಸಮುದ್ರದಲ್ಲಿ ಸೊಮಾಲಿಯಾಕ್ಕೆ ತೆರಳುತ್ತಿದ್ದ ನೌಕೆಯನ್ನು ಕಡಲ್ಗಳ್ಳರು ಅಪಹರಿಸಿದ್ದು, ಈ ವೇಳೆ ಭಾರತೀಯ ನೌಕಾಪಡೆಯ ಯುದ್ಧನೌಕೆ ಶನಿವಾರ ಅಡ್ಡಗಟ್ಟುವಲ್ಲಿ ಯಶಸ್ವಿಯಾಗಿದೆ.

ಅರಬ್ಬಿ ಸಮುದ್ರದ ಏಡನ್ ಕೊಲ್ಲಿಯಲ್ಲಿ ಕಾರ್ಯಾಚರಣೆಗೆ ನಿಯೋಜಿಸಲಾಗಿದ್ದ ಯುದ್ಧನೌಕೆ ಸೊಮಾಲಿಯಾ ಕರಾವಳಿಯ ಕಡೆಗೆ ಹೋಗುತ್ತಿದ್ದ ಎಂವಿ ರುಯೆನ್ ಎಂಬ ಮಾಲ್ಟಾ ಧ್ವಜದ ಹಡಗನ್ನು ಅಪಹರಣಕ್ಕೀಡಾದ ನಂತರ ಯಶಸ್ವಿಯಾಗಿ ತಡೆದಿದೆ.

ನೌಕಾಪಡೆಯ ಕಡಲ ಗಸ್ತು ವಿಮಾನವನ್ನು ತಿರುಗಿಸಲಾಯಿತು. ವಿಮಾನವು ಶುಕ್ರವಾರ ಮುಂಜಾನೆ ಅಪಹರಣಕ್ಕೊಳಗಾದ ಹಡಗಿನ ಚಲನೆಯನ್ನು ಪತ್ತೆಹಚ್ಚಿದ್ದು, ಅದರ ಚಲನವಲನಗಳ ನಿರಂತರ ನಿಗಾ ಇರಿಸಿತ್ತು.ಇದಾದ ಬಳಿಕ ಶನಿವಾರ ಭಾರತೀಯ ನೌಕಾಪಡೆಯ ಯುದ್ಧನೌಕೆ ಕಡಲ್ಗಳ್ಳತನ ವಿರೋಧಿ ಗಸ್ತುಗಾಗಿ ಏಡನ್ ಕೊಲ್ಲಿಯಲ್ಲಿ ಕಾರ್ಯಾಚರಣೆಗೆ ತೊಡಗಿತು. ಎಂವಿ ರುಯೆನ್ ಬಳಿ ತೆರಳಿ ಯಶಸ್ವಿಯಾಗಿ ತಡೆಹಿಡಿಯಿತು .

ಹಡಗು ಮತ್ತು ಅದರ ಸಿಬ್ಬಂದಿಯ ಸುರಕ್ಷತೆ ಮತ್ತು ಭದ್ರತೆಯನ್ನು ಖಾತ್ರಿಪಡಿಸಿಕೊಂಡಿದ್ದು, ಹೈಜಾಕ್ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ, ಅಪಹರಣಕ್ಕೊಳಗಾಗಿದ್ದ ನೌಕೆ ಈಗ ಸೊಮಾಲಿಯಾ ಕರಾವಳಿಯತ್ತ ಸಾಗುತ್ತಿದೆ.ಅಪಹರಣಕ್ಕೀಡಾದ ಹಡಗಿನಲ್ಲಿ 18 ಸಿಬ್ಬಂದಿಯಿದ್ದು, ಆರು ಅಪರಿಚಿತರು ಇದ್ದಾರೆಂದು ಸಂದೇಶವನ್ನು ಕಳುಹಿಸಿತ್ತು. ಈ ಸಂದೇಶ ಬಂದ ಕೂಡಲೇ ಪ್ರತಿಕ್ರಿಯಿಸಿದ ಭಾರತೀಯ ನೌಕಾಪಡೆಯು ತನ್ನ ಸಾಗರ ಗಸ್ತು ವಿಮಾನವನ್ನು ಕೂಡಲೇ ಅತ್ತ ತಿರುಗಿಸಿ ಕಣ್ಗಾವಲು ಕೈಗೊಂಡಿತ್ತು.

ಸೊಮಾಲಿಯಾ ಕಡೆಗೆ ಹೋಗುತ್ತಿದ್ದ ಎಂವಿ ರೆಯುನ್ ಎಂಬ ಹಡಗು ಗುರುವಾರ ಅಪಹರಣಕ್ಕೊಳಗಾಗಿದ್ದು, ಸಿಬ್ಬಂದಿ ಹಡಗಿನ ನಿಯಂತ್ರಣವನ್ನು ಕಳೆದುಕೊಂಡಿದ್ದರು ಎಂದು ಅಮೆರಿಕಾದ ಮೆರೈನ್ ಟ್ರೇಡ್ ಆಪರೇಷನ್ಸ್ ಹೇಳಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!