ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭಾ ಚುನಾವಣೆಗೆ ಜಗದೀಶ್ ಶೆಟ್ಟರ್ ನನ್ನ ವಿರುದ್ಧ ಸ್ಪರ್ಧೆ ಮಾಡಿದ್ರೆ ನನಗೇನೂ ಸಮಸ್ಯೆ ಇಲ್ಲ, ಧಾರಾಳ ಸ್ಪರ್ಧೆ ಮಾಡಲಿ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸವಾಲು ಹಾಕಿದ್ದಾರೆ.
ಸುದ್ದಿಗಾರರೊಂದಿಗೆ ಇಂದು ಮಾತನಾಡಿದ ಅವರು, ಹುಬ್ಬಳ್ಳಿ ಧಾರವಾಡ ಕ್ಷೇತ್ರದಿಂದ ಶೆಟ್ಟರ್ ಲೋಕಸಭೆ ಅಭ್ಯರ್ಥಿ ಆಗೋ ಇಚ್ಛೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಸಂಬಂಧಿಸಿ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ಜಗದೀಶ್ ಶೆಟ್ಟರ್ ಕಾಂಗ್ರೆಸ್ ಪಕ್ಷದ ನಾಯಕರು. ಮುಖ್ಯಮಂತ್ರಿಗಳು ಅವರ ಮನೆಗೆ ಹೋಗಿ ಭೇಟಿ ಕೊಟ್ಟಿದ್ದಾರೆ. ಅವರ ಪಕ್ಷದ ಅಭ್ಯರ್ಥಿ ಯಾರು ಅಂತ ನಮ್ಮನ್ನ ಕೇಳೋದು ಬೇಡ ಎಂದರು. ನಾನು ಬಿಜೆಪಿಯ ಹುಬ್ಬಳ್ಳಿ-ಧಾರವಾಡ ಎಂಪಿ. ನಾನು ಮತ್ತೆ ಹುಬ್ಬಳ್ಳಿಯಿಂದಲೇ ಸ್ಪರ್ಧೆ ಮಾಡುತ್ತೇನೆ. ಶೆಟ್ಟರ್ ಬಂದರೆ ನನಗೆ ಯಾವ ಭಯವೂ ಇಲ್ಲ ಎಂದು ಜೋಶಿ ಮತ್ತೆ ಸ್ಪಷ್ಟಪಡಿಸಿದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ