ಸಾಂಸ್ಕೃತಿಕ ನಗರಿಯಲ್ಲಿ ಪ್ರವಾಸಿಗರಿಗೆ ಖುಷಿ ಡಬಲ್, ಡಿ.22ರಿಂದ ‘ಮಾಗಿ’ ಉತ್ಸವ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅರಮನೆ ನಗರಿ ಮೈಸೂರಿನಲ್ಲಿ ಕ್ಯಾಲೆಂಡರ್ ಹೊಸ ವರ್ಷವನ್ನು ಬರಮಾಡಿಕೊಳ್ಳಲು ಸಕಲ ಸಿದ್ಧತೆ ನಡೆದಿದ್ದು, ಡಿಸೆಂಬರ್ 22 ರಿಂದ ಮಾಗಿ ಉತ್ಸವ ಆರಂಭವಾಗಲಿದೆ.

ಪ್ರತೀ ವರ್ಷದಂತೆ ಈ ವರ್ಷವೂ ಮಾಗಿ ಉತ್ಸವ ಆಯೋಜಿಸಲಾಗಿದ್ದು, ಪ್ರವಾಸಿಗರಿಗೆ ಮೈಸೂರಿಗೆ ಆಗಮಿಸಲು ಮತ್ತೊಂದು ಕಾರಣ ನೀಡಿದಂತಾಗಿದೆ.

ಚಳಿಗಾಲ, ಕ್ರಿಸ್‌ಮಸ್ ಹಾಗೂ ಹೊಸವರ್ಷದ ಆಚರಣೆಗಳನ್ನು ಆನಂದಿಸುವವರಿಗಾಗಿ ಮೈಸೂರು ಸಿದ್ಧವಾಗಿದ್ದು, ಈ ಬಾರಿ ಡಿ.22ರಿಂದ ಜ.1ರವರೆಗೆ ಮಾಗಿ ಉತ್ಸವ ನಡೆಯಲಿದೆ.

ಇದರ ಜೊತೆಗೆ ಪ್ರವಾಸಿಗರ ಸಂತಸವನ್ನು ಇಮ್ಮಡಿಗೊಳಿಸಲು ಬ್ರ್ಯಾಂಡ್ ಮೈಸೂರು ಫೆಸ್ಟ್ ಕೂಡ ಆರಂಭವಾಗಲಿದೆ. ವರ್ಷಾಂತ್ಯದಲ್ಲಿ ಸಾಮಾನ್ಯವಾಗಿ ರಜೆಯನ್ನು ಕಳೆಯಲು ಹೆಚ್ಚಿನ ಪ್ರವಾಸಿಗರು ಮೈಸೂರಿಗೆ ಆಗಮಿಸುತ್ತಾರೆ. ನಂತರ ಪ್ರವಾಸಿಗರ ಸಂಖ್ಯೆ ಕಡಿಮೆಯಾಗುತ್ತದೆ. ಇದನ್ನು ಗಮನದಲ್ಲಿ ಇಟ್ಟುಕೊಂಡು ಜನವರಿ ಮೊದಲ ಅಥವಾ ಎರಡನೇ ವಾರದಲ್ಲಿ ಬ್ರ್ಯಾಂಡ್ ಮೈಸೂರು ಫೆಸ್ಟ್ ನಡೆಯಲಿದೆ.

  • ಮಾಗಿ ಉತ್ಸವದಲ್ಲಿ ಏನೆಲ್ಲಾ ಇರಲಿದೆ?
    ಅರಮನೆಯಲ್ಲಿ ಫಲಪುಷ್ಪ ಪ್ರದರ್ಶನ
    ಅರಮನೆಗೆ ದೀಪಾಲಂಕಾರ
    ಖ್ಯಾತ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!