ಹೊಸದಿಗಂತ ಡಿಜಿಟಲ್ ಡೆಸ್ಕ್:
ಪುತ್ತೂರಿನಲ್ಲಿ ‘ತುರ್ತಚಿಕಿತ್ಸೆಯಲ್ಲಿ ಶುದ್ಧ ಆಯುರ್ವೇದ ಸೇವೆ’ಯನ್ನು ಒದಗಿಸುತ್ತಿರುವ ಖ್ಯಾತ ವೈದ್ಯರಾದ ಡಾ. ರವಿಶಂಕರ್ ಪೆರ್ವಾಜೆ ಅವರಿಗೆ ಅಗ್ನಿವೇಶ ವೈದ್ಯರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಅಗ್ನಿವೇಶ ಆಯುರ್ವೇದ ಅನುಷ್ಠಾನ, ರಾಷ್ಟ್ರೋತ್ಥಾನ ಆರೋಗ್ಯ ಸೇವಾ ಕೇಂದ್ರದವರು ಬೆಂಗಳೂರಿನ ಕೇಶವಶಿಲ್ಪ ಸಭಾಂಗಣದಲ್ಲಿ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
ಧನ್ವಂತರಿ ಜಯಂತಿಯ ಅಂಗವಾಗಿ ನಡೆದ ಈ ಸನ್ಮಾನ ಕಾರ್ಯಕ್ರಮದಲ್ಲಿ ಖಜಾಂಚಿಗಳಾದ ಕೆ.ಎಸ್ ನಾರಾಯಣ, ರಾಷ್ಟ್ರೋತ್ಥಾನ ಪರಿಷತ್‌ನ ಅಧ್ಯಕ್ಷರಾದ ಡಾ. ಸಮರ್ಥ್ ರಾವ್ ಇನ್ನಿತರರು ಉಪಸ್ಥಿತರಿದ್ದರು.