ಹೊಸ ದಿಗಂತ ಡಿಜಿಟಲ್ ಡೆಸ್ಕ್:
ನಾಳೆ ಬಳ್ಳಾರಿ ಪಾಲಿಕೆ ಮೇಯರ್ ಆಯ್ಕೆಗಾಗಿ ಚುನಾವಣೆ ನಿಗದಿ ಪಡಿಸಲಾಗಿತ್ತು. ಆದರೆ ವಿವಿಧ ಕಾರಣಗಳಿಂದ ನಾಳೆ ನಡೆಯಬೇಕಿದ್ದಂತ ಮೇಯರ್ ಚುನಾವಣೆಯನ್ನು ಮತ್ತೆ ಮುಂದೂಡಿಕೆ ಮಾಡಲಾಗಿದೆ.
ಬಳ್ಳಾರಿ ಪಾಲಿಕೆಯ ಮೇಯರ್ ಆಯ್ಕೆಗಾಗಿ ನಾಳೆ ಚುನಾವಣೆ ನಿಗದಿ ಪಡಿಸಲಾಗಿತ್ತು. ಇಂದು ಜಿಲ್ಲೆಯ ಕೆಲವೆಡೆ ಎನ್ಐಎ ಅಧಿಕಾರಿಗಳಿಂದ ದಾಳಿ ನಡೆಸಲಾಗಿದ್ದು, ಈ ಹಿನ್ನಲೆ ಮುಂಜಾಗ್ರತಾ ಕ್ರಮವಾಗಿ ಚುನಾವಣೆ ಮುಂದೂಡಲಾಗಿದೆ.
ಈ ಸಂಬಂಧ ಬಳ್ಳಾರಿ ಪ್ರಾದೇಶಿಕ ಆಯುಕ್ತ ಕೃಷ್ಣ ಬಾಜಪೆ ಅವರಿಗೆ ಎಸ್ಪಿಯವರು ಬಳ್ಳಾರಿಯಲ್ಲಿ ಎನ್ಐಎ ದಾಳಿಯಿಂದ ಅಭ್ಯರ್ಥಿಗಳಿಂದ ಶಾಂತಿ ಸುವ್ಯವಸ್ಥೆ ಕದಡೋ ಸಾಧ್ಯತೆ ಇದೆ. ರಾಜಕೀಯ ವೈಷಮ್ಯ, ಗಲಾಟೆ ಸಾಧ್ಯತೆ ಹಿನ್ನಲೆಯಲ್ಲಿ ಮುಂದೂಡುವಂತೆ ಸೂಚಿಸಿದ್ದರು. ಅದರಂತೆ ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೂಚನೆಯ ಮೇರೆಗೆ ಡಿ.18ರಂದು ನಡೆಯಬೇಕಿದ್ದಂತ ಬಳ್ಳಾರಿ ಪಾಲಿಕೆಗೆ ಮೇಯರ್ ಆಯ್ಕೆಯ ಚುನಾವಣೆಯನ್ನು ಪ್ರಾದೇಶಿಕ ಆಯುಕ್ತರು ಮುಂದೂಡಿದ್ದಾರೆ. ಮುಂದಿನ ಆದೇಶದವರೆಗೆ ಬಳ್ಳಾರಿ ಮೇಯರ್ ಚುನಾವಣೆ ಮುಂದೂಡಲಾಗಿದೆ ಎಂದಿದ್ದಾರೆ.
ಈ ಹಿಂದೆ ನವೆಂಬರ್ 28ರಂದು ಬಳ್ಳಾರಿ ಪಾಲಿಕೆ ಮೇಯರ್ ಆಯ್ಕೆಗಾಗಿ ಚುನಾವಣೆ ನಿಗದಿ ಪಡಿಸಲಾಗಿತ್ತು. ಅಂದು ಚುನಾವಣಾಧಿಕಾರಿ ಗೈರಾಗಿದ್ದು, ಚುನಾವಣೆ ಮುಂದೂಡಿಕೆ ಮಾಡಲಾಗಿತ್ತು. ಇದೀಗ ಮತ್ತೊಮ್ಮೆ ಬಳ್ಳಾರಿ ಪಾಲಿಕೆ ಮೇಯರ್ ಚುನಾವಣೆ ಮುಂದೂಡಿಕೆ ಮಾಡಲಾಗಿದೆ.