ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಳಗಾವಿಯಲ್ಲಿ ಪ್ರೀತಿಸಿ ಓಡಿ ಹೋದರೆಂದು ಯುವಕನ ತಾಯಿಯನ್ನು ಬೆತ್ತಲೆಗೊಳಿಸಿ ಹಲ್ಲೆ ನಡೆಸಲಾಗಿತ್ತು. ಈ ಪ್ರಕರಣ ಇಡೀ ರಾಜ್ಯವೇ ತಲೆತಗ್ಗಿಸುವಂತೆ ಮಾಡಿತ್ತು. ಇದೀಗ ಹಾವೇರಿಯಲ್ಲಿಯೂ ಇಂಥದ್ದೇ ಪ್ರಕರಣ ನಡೆದಿದೆ.
ಪ್ರೀತಿಸಿ ಓಡಿಹೋದ ಯುವಕನ ಸೋದರ ಮಾವನನ್ನು ಅರೆಬೆತ್ತಲೆಗೊಳಿಸಿ ಹಲ್ಲೆ ನಡೆಸಲಾಗಿದೆ. ರಾಣೆಬೆತ್ತನೂರಿನ ಮುದನೇರ ಗ್ರಾಮದ ಯುವಕ ಹಾಗೂ ಚಳಗೇರಿ ಗ್ರಾಮದ ಯುವತಿ ಪ್ರೀತಿಸಿ ಓಡಿಹೋಗಿದ್ದಾರೆ.
ಇದರಿಂದ ಸಿಟ್ಟಾದ ಯುವತಿ ಕಡೆಯವರು ಯುವಕನ ಸೋದರ ಮಾವನನ್ನು ಅರೆಬೆತ್ತಲೆಗೊಳಿಸಿ ಹಲ್ಲೆ ಮಾಡಿದ್ದಾರೆ. ಆಶ್ಚರ್ಯವೆಂದರೆ ಇವೆಲ್ಲವೂ ನಡೆದಿರುವುದು ರಾಣೆಬೆನ್ನೂರ ಗ್ರಾಮೀಣ ಪೊಲೀಸ್ ಠಾಣೆ ಎದುರೇ!
ಠಾಣೆ ಮುಂದೆ ಯುವಕನ ಕುಟುಂಬ ನ್ಯಾಯಕ್ಕಾಗಿ ಪ್ರತಿಭಟನೆ ನಡೆಸುತ್ತಿದೆ. ಬೆಳಗಾವಿಯಲ್ಲಿ ಆದ ಘಟನೆ ಇನ್ನೆಂದೂ ನಡೆಯಬಾರದು ಎಂದು ಸರ್ಕಾರ ಹೇಳಿತ್ತು, ಇನ್ನು ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.