ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳದಲ್ಲಿ ಸತತ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಇಡುಕ್ಕಿ ಮುಲ್ಲಪೆರಿಯಾರ್ ಜಲಾಶಯದ ನೀರಿನ ಮಟ್ಟ ಅಪಾಯದ ಹಂತಕ್ಕೆ ತಲುಪಿದ್ದು, ಒಂದು ಸಾವಿರ ಕ್ಯೂಸೆಕ್ ನೀರನ್ನು ಹೊರಬಿಡಲು ಅಧಿಕಾರಿಗಳು ನಿರ್ಧರಿಸಿದ್ದಾರೆ.
ಅಣೆಕಟ್ಟಿನ ನೀರಿನ ಮಟ್ಟ ಸೋಮವಾರ ಬೆಳಿಗ್ಗೆಯ ಹೊತ್ತಿಗೆ 137.50 ಅಡಿಗೆ ತಲುಪಿತ್ತು. ಪ್ರಸ್ತುತ ನೀರಿನ ಹರಿವು 12 ಸಾವಿರ ಕ್ಯೂಸೆಕ್ ಇದೆ. ಹೀಗಾಗಿ ಇಂದಿನಿಂದ ವಿವಿಧ ಹಂತಗಳಲ್ಲಿ ಜಲಾಶಯದ ಬಾಗಿಲುಗಳನ್ನು ತೆರೆದು ಒಂದು ಸಾವಿರ ಕ್ಯೂಸೆಕ್ ನೀರನ್ನು ಹೊರಬಿಡಲು ತೀರ್ಮಾನಿಸಲಾಗಿದೆ.
ಬರೋಬ್ಬರಿ 125 ವರ್ಷಗಳ ಹಳೆಯದಾದ ಈ ಜಲಾಶಯದ ಒಟ್ಟು ಸಾಮಥಥ್ಯಿರುವುದು 142 ಅಡಿ ಮಾತ್ರ.
ಈ ನಡುವೆ ಕೇರಳ, ತಮಿಳುನಾಡಿನಾದ್ಯಂತ ಭಾರಿ ಮಳೆಯಾಗುತ್ತಿದ್ದು, ನದಿಪಾತ್ರದ ಜನರಿಗೆ ಎಚ್ಚರಿಕೆಯಿಂದ ಇರಲು ಸೂಚನೆ ನೀಡಲಾಗಿದೆ.