ಪ್ರಧಾನಿ ಮೋದಿ ಬಳಿ ಐದು ಬೇಡಿಕೆಯಿಟ್ಟ ಸಿಎಂ ಸಿದ್ದು, ಏನವು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಹುದಿನಗಳ ಕಾಯುವಿಕೆ ನಂತರ ಇಂದು ಸಿಎಂ ಸಿದ್ದರಾಮಯ್ಯ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ್ದಾರೆ. ಭೇಟಿ ವೇಳೆ ರಾಜ್ಯದ ಬಗ್ಗೆ ಸಂಕ್ಷಿಪ್ತವಾಗಿ ಮಾತನಾಡಿದ್ದು, ಪ್ರಮುಖವಾದ ಐದು ಬೇಡಿಕೆಗಳನ್ನು ಸಿಎಂ ಪ್ರಧಾನಿ ಮುಂದೆ ಇಟ್ಟಿದ್ದಾರೆ.

ಯಾವ ಬೇಡಿಕೆಗಳು?

  1. ಕೇಂದ್ರದಿಂದ ಬರಬೇಕಿದ್ದ ಬರ ಪರಿಹಾರವನ್ನು ಶೀಘ್ರವೇ ಬಿಡುಗಡೆ ಮಾಡುವುದು
  2. ರಾಜ್ಯದಲ್ಲಿ ಬರ ಪರಿಸ್ಥಿತಿ ಇದೆ, ಹೀಗಾಗಿ ನರೇಗಾ ಕೆಲಸವನ್ನು 100 ರಿಂದ 150 ದಿನಕ್ಕೆ ಹೆಚ್ಚಿಸುವುದು.
  3. ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಬಜೆಟ್‌ನಲ್ಲಿ 5,300 ಕೋಟಿ ರೂಪಾಯಿ ನೀಡುತ್ತೇವೆ ಎಂದು ಹೇಳಲಾಗಿದೆ. ಕೊಟ್ಟ ಮಾತನ್ನು ನಡೆಸಿಕೊಡುವುದು.
  4. ಮಹದಾಯಿ ವಿಚಾರದಲ್ಲಿ ಗೆಜೆಟ್ ಆಗಿದೆ, ಯಾವ ಅಡೆತಡೆಯೂ ಇಲ್ಲ, ಪರಿಸರ ಕ್ಲಿಯರೆನ್ಸ್ ಬಾಕಿ ಇದೆ, ಕೇಂದ್ರವೇ ಇದನ್ನು ನೀಡಬೇಕಿದೆ. ಇದನ್ನು ಶೀಘ್ರವೇ ನೀಡಬೇಕು.
  5. ಮೇಕೆದಾಟು ಯೋಜನೆಯಿಂದ ಬೆಂಗಳೂರು ಹಾಗೂ ರಾಮನಗರ ಜಿಲ್ಲೆಯ ಜನರಿಗೆ ಕುಡಿಯುವ ನೀರಿನ ಅನುಕೂಲ ಆಗಲಿದೆ. ಹಾಗಾಗಿ ಯೋಜನೆ ಕಾರ್ಯಾರಂಭಕ್ಕೆ ಅನುಮತಿ ನೀಡಬೇಕು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!