ಗೋವಾದ ಉನ್ನತ ಶಿಕ್ಷಣ ಕೌನ್ಸಿಲ್ ವೈಸ್ ಚೇರ್ಮನ್ ಆಗಿ ಡಾ. ಗೋಪಾಲ್ ಮುಗೇರಾಯ ಮುಂಡ್ಕೂರು ನೇಮಕ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗೋವಾ ಎನ್‍ಐಟಿಯ ಮಾಜಿ ನಿರ್ದೇಶಕ ಡಾ. ಗೋಪಾಲ್ ಮುಗೇರಾಯ ಮುಂಡ್ಕೂರು ಅವರನ್ನು ಗೋವಾ ರಾಜ್ಯದ ಶಿಕ್ಷಣ ಇಲಾಖೆಯು ಉನ್ನತ ಶಿಕ್ಷಣ ಕೌನ್ಸಿಲ್ ಇದರ ವೈಸ್ ಚೇರ್ಮನ್ ಆಗಿ ಐದು ವರ್ಷಗಳ ಅವಧಿಗೆ ನೇಮಕಗೊಳಿಸಿ ಆದೇಶ ಹೊರಡಿಸಿದೆ.
ಈ ಮೂಲಕ ಕೌನ್ಸಿಲ್ ಗೆ ನೇಮಕವಾದ ಪ್ರಥಮ ಕನ್ನಡಿಗ ಎಂಬ ಕೀರ್ತಿಗೆ ಪಾತ್ರವಾಗಿದ್ದಾರೆ.

ಪ್ರಸ್ತುತ ನಿಟ್ಟೆ ತಾಂತ್ರಿಕ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾಗಿದ್ದು,ಈ ಹಿಂದೆ ಸುರತ್ಕಲ್‍ನ ಎನ್‍ಐಟಿಕೆಯಲ್ಲಿ ಪ್ರೊಫೆಸರ್, ಡೀನ್ ಆಗಿ ಕರ್ತವ್ಯ ನಿರ್ವಹಿಸಿದ್ದರು.ಬಳಿಕ ಎನ್‍ಐಟಿ ಅಗರ್ತಲ, ಹೆಚ್ಚುವರಿಯಾಗಿ ಮಿಜೋರಾಂ ನಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ.2018ರಲ್ಲಿ ಮಾಸ್ಕೋದಲ್ಲಿ ನಡೆದ ಬ್ರಿಕ್ಸ್ ಸಮ್ಮೇಳನ,2016ರಲ್ಲಿ ರಾಷ್ಟ್ರಾಧ್ಯಕ್ಷರ ತಂಡದೊಂದಿಗೆ ಚೈನಾಗೆ ಅಧಿಕೃತ ಪ್ರವಾಸ,ಕರ್ನಾಟಕ ರಾಜ್ಯದ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ತಾಂತ್ರಿಕ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದಾರೆ.

ಎನ್‍ಐಟಿಕೆಯಲ್ಲಿ ಕೆಮಿಕಲ್ ಎಂಜಿನಿಯರಿಂಗ್‍ನಲ್ಲಿ ಬಿ.ಟೆಕ್,ಎಂ.ಟೆಕ್ ಪದವಿ, ಬಳಿಕ , ನಂತರ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಸೆ`ನ್ಸ್ (ಐಐಎಸ್‍ಸಿ) ಬೆಂಗಳೂರಿನಿಂದ ಪಿಎಚ್‍ಡಿ ಪಡೆದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!