ನಾಡಿಗೆ ಬಂದು ಜನರ ಕೂಗಾಟ ಕೇಳಿ ಮರ ಏರಿ ಕುಳಿತ ಜಾಂಬವಂತ!

ಹೊಸದಿಗಂತ ವರದಿ ವಿಜಯನಗರ:

ಕಾಡಿನಿಂದ ವಿಜಯನಗರದ ಹೊಸಪೇಟೆ ಸಿಟಿಗೆ ಜಾಂಬವಂತ ಎಂಟ್ರಿ ಕೊಟ್ಟಿದ್ದಾನೆ.

ಸಿಟಿ ಮಧ್ಯದ ಸಿರಸನಕಲ್ಲು ಏರಿಯಾಕೆ ಬಂದು ಎಲ್ಲೆಡೆ ರಾಜಾರೋಷವಾಗಿ ಕರಡಿ ಎಲ್ಲೆಡೆ ಓಡಾಡಿದೆ. ಇದರಿಂದ ಭಯಬಿದ್ದ ಜನ ಕೂಗಾಡಿ, ಕಿರುಚಾಡಿದ್ದಾರೆ.

ಜನರ ಕೂಗಾಟಕ್ಕೆ ಭಯಬಿದ್ದ ಕರಡಿ ಠಕ್ಕನೆ ಮರದ ಮೇಲೆ ಏರಿ ಕುಳಿತಿದೆ, ತಕ್ಷಣವೇ ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ಕರಡಿಯನ್ನು ಕೆಳಕ್ಕೆ ಇಳಿಸುವ ಪ್ರಯತ್ನ ಮಾಡಿದ್ದಾರೆ.

ಆದರೆ ಮಾನವನ ಭಯಕ್ಕೆ ಕರಡಿ ಕೆಳಗೆ ಇಳಿಯಲು ನಿರಾಕರಿಸಿದೆ. ನಿರಂತರ ಕಾರ್ಯಾಚರಣೆ ಹಾಗೂ ಅರವಳಿಗೆ ನೀಡಿ ಕರಡಿಯನ್ನು ಸೆರೆಹಿಡಿಯಲಾಗಿದೆ. ಬೆಳಗಿನ ಜಾವ ಕರಡಿಯನ್ನು ಕಾಡಿಗೆ ಬಿಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!