ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡದ ಹಿರಿಯ ನಟಿ ಹೇಮಾ ಚೌಧರಿಗೆ ತೀವ್ರ ಅನಾರೋಗ್ಯ ಕಾಡಿದ್ದು, ಬೆಂಗಲೂರಿನ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹೇಮಾ ಚೌಧರಿ ಅವರಿಗೆ ಬ್ರೇನ್ ಹೆಮರೇಜ್ ಆಗಿದ್ದು, ಎರಡು ದಿನಗಳ ಹಿಂದೆಯೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೇಮಾ ಅವರು ಪುತ್ರ ಐರ್ಲೆಂಡ್‌ನಲ್ಲಿದ್ದಾರೆ. ಅವರ ಆಗಮನಕ್ಕೆ ಕುಟುಂಬದವರು ಕಾಯುತ್ತಿದ್ದಾರೆ.
ಚಿಕಿತ್ಸೆಗೆ ದೇಹ ಸ್ಪಂದಿಸುತ್ತಿಲ್ಲ ಎಂದು ವೈದ್ಯರು ಮಾಹಿತಿ ನೀಡಿದ್ದು, ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದ್ದಾರೆ. ಅವರು ಬೇಗ ಗುಣಮುಖರಾಗಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.