ಗರ್ಲ್ಸ್ ಹಾಸ್ಟೆಲ್ ಬಾತ್‌ರೂಂನಲ್ಲಿ ಕ್ಯಾಮೆರಾ ಇಟ್ಟು ಸಿಕ್ಕಿ ಬಿದ್ದ ಕಾಮುಕ

ಹೊಸದಿಗಂತ ವರದಿ ಕಲಬುರಗಿ: 

ವಿದ್ಯಾರ್ಥಿನಿಯರ ಹಾಸ್ಟೆಲ್ ಬಾತ್ರೂಂನಲ್ಲಿ ಕಿರಾತಕನೊಬ್ಬ ಕ್ಯಾಮೆರಾ ಇಟ್ಟು ವಿಕೃತ ಮೆರೆದಿರುವ ಘಟನೆ ಜಿಲ್ಲೆಯ ಜೇವರ್ಗಿ ತಾಲೂಕಿನಲ್ಲಿ ನಡೆದಿದೆ.

ಜಿಲ್ಲೆಯ ಜೇವರ್ಗಿ ತಾಲೂಕಿನ ಪಟ್ಟಣದ ಶಾಂತಾ ನಗರದಲ್ಲಿರುವ ಅಲ್ಪಸಂಖ್ಯಾತ ವಸತಿ ನಿಲಯದಲ್ಲಿ ಈ ಘಟನೆ ನಡೆದಿದ್ದು, ಹಾಸ್ಟೆಲ್ ಇರುವ ಏರಿಯಾದ ಸಲೀಂ ಎಂಬ ವ್ಯಕ್ತಿಯಿಂದ ಈ ವಿಕೃತಿ ನಡೆದಿದೆ ಎಂದು ತಿಳಿದುಬಂದಿದೆ.

ಬಾತ್ರೂಂನಲ್ಲಿ ಕ್ಯಾಮೆರಾ ಇಟ್ಟಿರುವುದು ವಿದ್ಯಾರ್ಥಿನಿಯರು ಕಂಡು ಬಾತ್ ರೂಮ್ ನಿಂದ ಹೊರಬಂದು ಕಾಮುಕನನ್ನು ಹಿಡಿದು ಥಳಿಸಿದ್ದಾರೆ.ಕಾಮುಕನನ್ನು ಹಿಡಿದು ಥಳಿಸುವಾಗ ಸ್ಥಳೀಯರು ಬಂದು ಪರಾರಿಯಾಗಲು ಸಹಕಾರ ನೀಡಿದ್ದು, ಮೇಲ್ನೋಟಕ್ಕೆ ಕಂಡು ಬಂದಿದೆ.

ಘಟನೆ ಬಳಿಕ ಸ್ಥಳೀಯರು ತಾಲೂಕಿನ ತಹಶೀಲ್ದಾರ್ ಹಾಗೂ ಸ್ಥಳೀಯ ಪೋಲಿಸರಿಗೆ ಮಾಹಿತಿ ನೀಡಿದ್ದಾರೆ.ಮಾಹಿತಿ ದೊರೆತ ತಕ್ಷಣವೇ ಪೋಲಿಸರು ಸ್ಥಳಕ್ಕೆ ಹಾಜರಾಗಿ ಮನೆಯವರ ವಿಚಾರಣೆ ನಡೆಸಿದ್ದು,ಆರೋಪಿಯ ಮನೆಯವರನ್ನು ವಿಚಾರಣೆ ನಡೆಸಿದ ಬಳಿಕ ಮನೆಯವರು ಆರೋಪಿಯನ್ನು ಕರೆಸಿದ್ದಾರೆ.

ಇನ್ನೂ ಬಾತ್ರೂಂ ನಲ್ಲಿ ಕ್ಯಾಮೆರಾ ಇಟ್ಟ ಕಿರಾತಕನನ್ನು ಜೇವರ್ಗಿ ಪೋಲಿಸರು ವಶಕ್ಕೆ ಪಡೆದಿದ್ದು, ಜೇವರ್ಗಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!